Saturday, October 5, 2024

ಹಿಂದೂಗಳು ಒಂದಾದರೆ ಬಿಜೆಪಿಗೆ ಲಾಭ : ಶಾಸಕ ಯತ್ನಾಳ್

ರಾಯಚೂರು : ಮತಗಳು ಒಡೆಯುವುದರಿಂದ ಬಿಜೆಪಿಗೆ ಹಿನ್ನಡೆ ಆಗುತ್ತದೆ. ಹೀಗಾಗಿ, ಸಮಗ್ರ ಹಿಂದೂಗಳು ಒಂದಾದರೆ ಬಿಜೆಪಿಗೆ ಲಾಭ ಆಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ರಾಯಚೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರು ಮತ್ತು ಅಮಿತ್ ಶಾ ಮಾತುಕತೆ ಆಗಿದೆ ಎಂಬುದಾಗಿ ಕೇಳಿಪಟ್ಟಿದ್ದೀನಿ. ನನಗೆ ಈವರೆಗೂ ಕೂಡ ಅಧಿಕೃತವಾಗಿ ಮಾಹಿತಿ ಇಲ್ಲ. ಹೊಂದಾಣಿಕೆ ಆಗಲಿ ಎಂದರು.

ಎನ್‌ಡಿಎನಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳಿವೆ. ಮಹಾರಾಷ್ಟ್ರದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್​ನ ದೊಡ್ಡ ಗುಂಪು ಅಜಿತ್ ಪವರ್ ನೇತೃತ್ವದಲ್ಲಿ ಬಂತು. ಇನ್ನೂ ಬಹಳಷ್ಟು ಬದಲಾವಣೆ ಆಗುತ್ತದೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಪ್ರಯತ್ನ ನಡೆಸಿದ್ದಾರೆ. ದೇಶದಲ್ಲಿ ಒಳ್ಳೆಯ ಶುಭ ಸೂಚನೆ ನಡೆದಿದೆ. ರಾಜ್ಯದಲ್ಲಿ ಹೈಕಮಾಂಡ್ ಏನೇ ನಿರ್ಣಯ ತೆಗೆದುಕೊಂಡ್ರು ಬದ್ಧ ಎಂದು ಹೇಳಿದರು.

ಎಲ್ಲೆಲ್ಲಿ ಅವಶ್ಯಕತೆ ಇದೆ ಅಲ್ಲಿ ಮೈತ್ರಿ

ಹಿಂದೆ ಶಿವಸೇನೆ ಮತ್ತು ಬಿಜೆಪಿ ಹೊಂದಾಣಿಕೆಯಾಗಿತ್ತು. ಅಕಾಲಿದಳ ಮತ್ತು ಬಿಜೆಪಿ ಪಜಾಂಬ್​ನಲ್ಲಿತ್ತು. ಆಂಧ್ರದಲ್ಲಿ ತೆಲುಗುದೇಶಂ ಮತ್ತು ಬಿಜೆಪಿ ಇತ್ತು. ಎಲ್ಲೆಲ್ಲಿ ಅನಿವಾರ್ಯತೆ ಮತ್ತು ಅವಶ್ಯಕತೆ ಇದೆ ಅಲ್ಲಿ ಹೊಂದಾಣಿಕೆ. ಎಲ್ಲಿ ಮತಗಳು ಒಡೆದು ಹೋಗಬಾರದು ಎಂದು ಶಾಸಕ ಯತ್ನಾಳ್ ತಿಳಿಸಿದರು.

RELATED ARTICLES

Related Articles

TRENDING ARTICLES