ಶಿವಮೊಗ್ಗ : ಅಪ್ರಾಪ್ತ ಬಾಲಕನಿಗೆ ಬೈಕ್ ಓಡಿಸಲು ಕೊಟ್ಟವರಿಗೆ 25 ಸಾವಿರ ದಂಡ ವಿಧಿಸಿದ ನಗರದ 4ನೇ ಎ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ.
ನಗರದ ಕ್ಲಾರ್ಕ್ ಪೇಟೆ ನಿವಾಸಿಯಾಗಿರುವ ಓಂಪ್ರಕಾಶ್ (47) ಎಂಬುವವರು ತಮ್ಮ 17 ವರ್ಷದ ಮಗನಿಗೆ ದ್ವಿಚಕ್ರ ವಾಹನಾ ಚಾಲನೆ ಮಾಡಲು ಅವಕಾಶ ನೀಡಿದ್ದರು. ಬಳಿಕ ಬಾಲಕ ವಾಹನ ಚಾಲನಾ ಪರವಾನಿಗೆ ಇಲ್ಲದೆ ಬೈಕ್ ಚಲಾಯಿಸುತ್ತಿದ್ದನು. ಈ ವೇಳೆ ಅಶೋಕ ಹೋಟೆಲ್ ಬಳಿ ವಾಹನ ತಪಾಸಣೆ ಮಾಡುವಾಗ ಬಾಲಕನನ್ನು ತಡೆದಿದ್ದ ಸಂಚಾರಿ ಪೋಲಿಸರು.
ಇದನ್ನು ಓದಿ : ಇನ್ಮುಂದೆ ದೇವಾಲಯದ ಸುತ್ತ ಗುಟ್ಕಾ ಸಿಗರೇಟ್ ನಿಷೇಧ : ಸಚಿವ ರಾಮಲಿಂಗಾರೆಡ್ಡಿ
ಬಳಿಕ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದರಿಂದ, ಅಪ್ರಾಪ್ತ ಬಾಲಕನ ಮೇಲೆ ಕೇಸು ದಾಖಲಿಸಿಕೊಂಡ ನಗರದ ಪಶ್ಚಿಮ ಸಂಚಾರಿ ಪೋಲಿಸರು. ಈ ಘಟನೆ ಹಿನ್ನೆಲೆ ಬಾಲಕನ ತಂದೆ ಓಂ ಪ್ರಕಾಶ್ ಅವರಿಗೆ 25 ಸಾವಿರ ರೂ. ದಂಡ ವಿಧಿಸಿದ 4ನೇ ಎ ಸಿ ಜೆ & ಜೆ ಎಂ ಎಫ್ ಸಿ ನ್ಯಾಯಾಲಯ.
ಇನ್ನೂ ಮುಂದೆ ಅಪ್ರಾಪ್ತ ಬಾಲಕರಿಗೆ ವಾಹನ ಓಡಿಸಲು ಕೊಟ್ಟಿದ್ದಲ್ಲಿ ಅವರಿಗೆ 25 ಸಾವಿರ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ.