ಚಿತ್ರದುರ್ಗ : ಬಾಡಿಗೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದ ಕಾರಣ ಅಂಗನವಾಡಿ ಮಕ್ಕಳು ಮತ್ತು ಸಿಬ್ಬಂದಿ ಕೆಲಕಾಲ ಕಟ್ಟಡದ ಹೊರಗೆ ನಿಂತ ಘಟನೆಯೂ ಹೊಸದುರ್ಗ ಪಟ್ಟಣದ 17 ನೇ ವಾರ್ಡ್ ನಲ್ಲಿ ನಡೆದಿದೆ.
ಕಳೆದ 10 ತಿಂಗಳಾದರೂ ಅಂಗನವಾಡಿ ಕಟ್ಟದ ಬಾಡಿಗೆ ನೀಡದ ಕಾರಣಕ್ಕೆ ಕಟ್ಟದ ಮಾಲೀಕ ಸಾದಿಕ್ ಶಾಲೆಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ಅಂಗನವಾಡಿ ಮಕ್ಕಳು ಮತ್ತು ಸಿಬ್ಬಂದಿ ಕೆಲ ಕಾಲ ಕಟ್ಟಡ ಹೊರಗೆ ನಿಂತುಕೊಳ್ಳುವ ಪರಿಸ್ಥತಿ ನಿರ್ಮಾಣವಾಗಿದೆ.
ಘಟನೆ ವಿಚಾರ ತಿಳಿಯಿತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಿಡಿಪಿಒ ಅಭಿಲಾಷ ಪರಿಶೀಲನೆ ನಡೆಸಿದ್ದಾರೆ. ಈ ವೇಲೆ ತಮ್ಮ ಮಕ್ಕಳನ್ನು ಅಂಗನವಾಡಿ ಕಟ್ಟಡದಿಂದ ಹೊರಗಿಡಲು ಕಾರಣರಾದ ಅಧಿಕಾರಿಗಳ ವಿರುದ್ದ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡೊಸಿದ್ದಾರೆ.
ಬಳಿಕ ಹೊಸದುರ್ಗ ಪುರಸಭೆ ಸದಸ್ಯರಾದ ಮಂಜುನಾಥ್ ಮತ್ತು ನಾಗರಾಜ್ ಕಟ್ಟಡದ ಮಾಲೀಕ ಸಾಧಿಕ್ ರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೇ, ಬಾಡಿಗೆ ಹಣವನ್ನು ಕೊಡದಿದ್ದರೇ ಮತ್ತೆ ಶಾಲೆಗೆ ಬೀಗ ಹಾಕುವ ಎಚ್ಚರಿಕೆಯನ್ನು ಮಾಲೀಕ ಸಾಧಿಕ್ ಅಧಿಕಾರಿಗಳು ಮತ್ತು ಸದಸ್ಯರಿಗೆ ನೀಡಿ ಬಳಿಕ ಬಾಗಿಲು ತೆರೆದಿದ್ದಾರೆ.