ಬೆಂಗಳೂರು : ಉದ್ಯೋಗ ಕೇಳಿದ ಮಹಿಳೆಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಚಂದ್ರನಲ್ಲಿಗೆ ಕಳಿಸುತ್ತೇನೆ ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಸಿಎಂ ಮನೋಹರ್ ಲಾಲ್ ಅವರು ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದಾಗ ಮಹಿಳೆಯೊಬ್ಬರು ಉದ್ಯೋಗ ನೀಡುವಂತೆ ಮನವಿ ಮಾಡಿದ್ದಾರೆ. ಎಲ್ಲರಿಗೂ ಉದ್ಯೋಗ ಸಿಗುವಂತೆ ಹಳ್ಳಿಯಲ್ಲಿ ಕಾರ್ಖಾನೆ ಸ್ಥಾಪನೆ ಮಾಡಿ ಎಂದು ಕೇಳಿದ್ದಾರೆ.
ಇದಕ್ಕೆ ವಿಚಿತ್ರವಾಗಿ ಉತ್ತರಿಸಿರುವ ಅವರು, ‘ಇಸ್ರೋ ಸಂಸ್ಥೆ ಮತ್ತೆ ಚಂದ್ರಯಾನ-4 ಉಡಾವಣೆ ಮಾಡಿದಾಗ ನಿಮ್ಮನ್ನು ಚಂದ್ರನಲ್ಲಿಗೆ ಕಳುಹಿಸುತ್ತೇವೆ. ಸುಮ್ಮನೆ ಕುಳಿತುಕೊಳ್ಳಿ’ ಎಂದು ಉಡಾಫೆ ಹೇಳಿಕೆ ನೀಡಿದ್ದಾರೆ. ಸಿಎಂ ಮನೋಹರ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕನಿಷ್ಠ ಸರ್ಕಾರದಿಂದ ಗರಿಷ್ಠ ಆಡಳಿತ
ಸೇವಾ ಮನೋಭಾವನೆಯಿಂದ ಸಾರ್ವಜನಿಕರಿಗಾಗಿ ದುಡಿಯುವುದು ಬಿಜೆಪಿಯ ಗುರಿ. ‘ಕನಿಷ್ಠ ಸರ್ಕಾರದಿಂದ ಗರಿಷ್ಠ ಆಡಳಿತ’ ಎಂಬ ಮಂತ್ರದೊಂದಿಗೆ ಹರಿಯಾಣದಲ್ಲಿ ಸುಸ್ಥಿರ ಅಭಿವೃದ್ಧಿಯ ಹೊಸ ವ್ಯಾಖ್ಯಾನವನ್ನು ನಾವು ಬರೆಯುತ್ತಿರುವುದಕ್ಕೆ ಇದೇ ಕಾರಣ ಎಂದು ಹೇಳಿದ್ದಾರೆ.
Apathy at display:
A woman posed a request to Haryana CM Manohar Lal Khattar to establish a factory so that employment can be generated.
He replies “Next time when Chandrayaan-4 is launched, we will send you to the moon.” #Haryana #ManoharLalKhattar @BJP4Haryana pic.twitter.com/44fLWJd9vA
— NewsTAP (@newstapTweets) September 7, 2023