Sunday, November 24, 2024

ಗೌರಿ-ಗಣೇಶ ಹಬ್ಬಕ್ಕೆ ಬಸ್​ ದರ ಏರಿಕೆ ಬಿಸಿ !

ಬೆಂಗಳೂರು : ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೊರಟಿರುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದ್ದು ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ಬಸ್​ ಏಕಾಏಕಿ 3 ಪಟ್ಟು ಬೆಲೆ ಏರಿಕೆಯಾಗಿದೆ.

ರಾಜ್ಯದಲ್ಲಿ ಹಬ್ಬದ ಹಿನ್ನೆಲೆ ದಿನನಿತ್ಯ ವಸ್ತುಗಳ ಜೊತೆಗೆ ಹಬ್ಬದ ಸಾಮಾಗ್ರಿಗಳ ಬೆಲೆಯೂ ಏರಿಕೆಯಾಗಿದೆ. ಹಬ್ಬಕ್ಕೆ ಊರುಗಳಿಗೆ ತೆರಳಲು ಸಿದ್ದವಾಗಿರುವ ಜನತೆಗೆ ಖಾಸಗಿ ಬಸ್​ ಗಳು ತಮ್ಮ ದರಪಟ್ಟಿಯಲ್ಲಿ ಬದಲಾವಣೆ ಮಾಡಿದ್ದಾರೆ. ಏಕಾಏಕಿ ಟಿಕೆಟ್​ ದರಗಳನ್ನು 3 ಪಟ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಭಾರತೀಯ ಆಟಗಾರರಿಗೆ ಗೌತಮ್​ ಗಂಭೀರ್ ವಾರ್ನಿಂಗ್​​!

ಈ ಹಿಂದೆ 700 ಇದ್ದ ಬಸ್ ನ ಸಾಮಾನ್ಯ ದರ​ ಇದೀಗ ರೂ.2,500 ರಿಂದ ರೂ. 3000ಕ್ಕೆ ಏರಿಕೆಯಾಗಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ಬಸ್​ಗಳ ಅಂದ ದರ್ಬಾರಿಗೆ ಕಡಿವಾಣ ಹಾಕದ ಇಲಾಖೆ ಬೇಕಾಬಿಟ್ಟಿ ದರ ಹೆಚ್ಚಳ ಮಾಡಿದ್ದರು ಸಾರಿಗೆ ಇಲಾಖೆ ಜಾಣಕುರುಡು ಪ್ರದರ್ಶಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES