Monday, May 20, 2024

ಕಿಚ್ಚನ ಹುಟ್ಟುಹಬ್ಬದೊಂದು ಸಿನಿ ಪ್ರೇಕ್ಷಕರಿಗೆ ಗುಡ್ ನ್ಯೂಸ್!

ಬೆಂಗಳೂರು : ಪ್ಯಾನ್ ಇಂಡಿಯಾ ಸ್ಟಾರ್, ಸ್ಟೈಲಿಶ್ ಹೀರೋ, ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆ ಭಾರತೀಯ ಚಿತ್ರರಂಗದ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಸಿಗಲಿದೆ.

ಮಗಧೀರ, ಬಾಹುಬಲಿ, ಆರ್ ಆರ್ ದಂತಹ ಹಿಟ್ ಚಿತ್ರಗಳ ಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಹಾಗೂ ಪ್ಯಾನ್ ಇಂಡಿಯಾ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದ ಎಸ್.ಎಸ್. ರಾಜಮೌಳಿಯ ಎಲ್ಲಾ ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿದ್ದ, ವಿಜಯೇಂದ್ರ ಪ್ರಸಾದ್ ಅವರು ಕನ್ನಡದ ಪ್ರತಿಷ್ಠಿತ ಆರ್ ಸಿ ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ  ಸ್ಕ್ರಿಪ್ಟ್ ಸೂಪರ್ ವೈಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ ಅವರು ನಟಿಸಲಿದ್ದು, ಆರ್ ಚಂದ್ರು ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಇದನ್ನು ಓದಿ : ಕಿಚ್ಚನ ಬರ್ತ್​ಡೇಗೆ ಒಂದಲ್ಲಾ ಎರಡಲ್ಲಾ.. 4 ಬಿಗ್ ಸರ್ಪ್ರೈಸ್..!

ಈ ಮೂವರು ದಿಗ್ಗಜರು ಒಂದಾಗಿ ಮಾಡುತ್ತಿರುವ ಈ ಸಿನಿಮಾ ಇಡೀ ಭಾರತವೇ ಕಾತುರದಿಂದ ಕಾಯುತ್ತಿದ್ದು, ಈ ವರ್ಷದ ಮೆಗಾ ಹಿಟ್ ಚಿತ್ರ ಇದಾಗಲಿದೆ. ಆರ್ ಸಿ ಸ್ಟುಡಿಯೋಸ್ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, 5 ದೊಡ್ಡ ದೊಡ್ಡ ಚಿತ್ರಗಳಿಗೆ ಈ ವರ್ಷ ಚಾಲನೆ ದೊರೆಯಲಿದೆ. ಆರ್ ಚಂದ್ರು ಅವರು ಏನೇ ಮಾಡಿದರು ತುಂಬಾ ವಿಶೇಷವಾಗಿರಲಿದ್ದು, ಈ ಚಿತ್ರವೂ ಕೂಡ ಹಲವು ವಿಶೇಷತೆಗಳಿಂದ ಕೂಡಿರಲಿದ್ದು ಆ ವಿಶೇಷತೆಗಳಿಗೆ ಚಿತ್ರರಂಗ ಕಾಯುತ್ತಿದೆ.

ಆರ್ ಸಿ ಸ್ಟುಡಿಯೋಸ್ ಈ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಲು ಸಕಲ ಸಿದ್ಧತೆಗಳು ಮಾಡಿಕೊಂಡಿದ್ದು, ಕಿಚ್ಚನ ಹುಟ್ಟುಹಬ್ಬವಾದ ಸೆಪ್ಟೆಂಬರ್ 2 ರಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಅಷ್ಟೇ ಅಲ್ಲದೆ ವಿಜಯೇಂದ್ರ ಪ್ರಸಾದ್ ಅವರು ಸ್ಪ್ರಿಪ್ಟ್ ಸೂಪರ್ ವೈಸಿಂಗ್, ಕಿಚ್ಚ ಸುದೀಪ್ ಅವರ ನಟನೆ ಹಾಗೂ ಆರ್ ಚಂದ್ರು ಅವರ ನಿರ್ದೇಶನಕ್ಕೆ ಇಡೀ ಚಿತ್ರರಂಗವೇ ಕಾತುರದಿಂದ ಕಾಯುತ್ತಿದೆ. ಮತ್ತು ಚಿತ್ರರಂಗದ ಮೋಸ್ಟ್ ಎಕ್ಸ್​ಪೆಕ್ಟೆಡ್ ಚಿತ್ರವಾಗಿದೆ.

ಪ್ರಸಾದ್ ಅವರು 25ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಬರೆದಿದ್ದು, ಎಲ್ಲಾ ಚಿತ್ರಗಳು ಕೂಡ ಕಮರ್ಷಿಯಲ್ ಸಕ್ಸಸ್ ಕಂಡಿದ್ದು, ಆಂಧ್ರದ ಪ್ರತಿಷ್ಠಿತ ನಂದಿ ಮತ್ತು ಫಿಲಂ ಫೇರ್ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆರ್ ಸಿ ಸ್ಟುಡಿಯೋಸ್ ಸಂಸ್ಥೆಯು ಬಹುಕೋಟಿ ವೆಚ್ಚದಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಮುರಿದು ಗ್ಲೋಬಲ್ ಮೂವಿ ಕಾನ್ಸೆಪ್ಟ್ ನೊಂದಿಗೆ ಇಂಡಿಯನ್ ಹ್ಯೂಜ್ ಬಜೆಟ್ ಚಿತ್ರವಾಗಲಿದೆ.

ಈ ಮೂಲಕ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ಕೂಡ ಗ್ಲೋಬಲ್ ಸಂಸ್ಥೆಯಾಗಿ ಯುವ, ಪ್ರತಿಭಾವಂತ ಮತ್ತು ಉದಯೋನ್ಮುಖ ಅವಕಾಶ ಕಲ್ಪಿಸಲಾಗುತ್ತಿದೆ. ಈ ಮೂವರು ದಿಗ್ಗಜರ ಸಮಾಗಮವು ಮುಂದಿನ ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಕಿಚ್ಚನ ಹುಟ್ಟುಹಬ್ಬಕ್ಕೆ ಆರ್ ಸಿ ಸ್ಟುಡಿಯೋಸ್ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಪಕ್ಕಾ ಆಗಿದೆ.

RELATED ARTICLES

Related Articles

TRENDING ARTICLES