Monday, May 20, 2024

ಕಿಚ್ಚನ ಬರ್ತ್​ಡೇಗೆ ಒಂದಲ್ಲಾ ಎರಡಲ್ಲಾ.. 4 ಬಿಗ್ ಸರ್ಪ್ರೈಸ್..!

ಬೆಂಗಳೂರು : ಮೂರು ವರ್ಷಗಳಿಂದ ಬ್ರೇಕ್ ಬಿದ್ದಿದ್ದ ಕಿಚ್ಚೋತ್ಸವಕ್ಕೆ ಈ ಬಾರಿ ಬಿಗ್ ಓಪನಿಂಗ್ ಸಿಗ್ತಿದೆ. ಆಲ್ ಇಂಡಿಯಾ ಕಟೌಟ್ ಕಿಚ್ಚನ ಬರ್ತ್ ಡೇ ಬಹಳ ಅದ್ದೂರಿ ಹಾಗೂ ಅವಿಸ್ಮರಣೀಯವಾಗಿರಲಿದೆ. ಒಂದೆಡೆ ಅಭಿನಯ ಚಕ್ರವರ್ತಿಯಿಂದ ಅಭಿಮಾನಿಗಳ ಭೇಟಿ. ಮತ್ತೊಂದ್ಕಡೆ ಒಂದಲ್ಲಾ ಎರಡಲ್ಲಾ ನಾಲ್ಕು ಸರ್​​ಪ್ರೈಸ್​​ಗಳು. ಆ ಪೈಕಿ ಕೆಆರ್​ಜಿ ಹಾಗೂ ಆರ್​ಸಿ ಮೂವೀಸ್​ನಿಂದ ಬಿಗ್ ಬ್ರೇಕಿಂಗ್ ನ್ಯೂಸ್ ಸಿಗ್ತಿದೆ.

ಹೌದು, ಒಂದು ಕಾಲದಲ್ಲಿ ಐರೆನ್ ಲೆಗ್ ಆಗಿದ್ದ ಇವ್ರು, ಸದ್ಯ ಭಾರತೀಯ ಚಿತ್ರರಂಗ ಹೆಮ್ಮೆ ಪಡುವಂತಹ ಗೋಲ್ಡನ್ ಲೆಗ್ ಆಗಿದ್ದಾರೆ. ಗಾಡ್​ಫಾದರ್ ಇಲ್ಲದೆ ಇವ್ರು ಹಂತ ಹಂತವಾಗಿ ಬೆಳೆದ ಪರಿ ನಿಜಕ್ಕೂ ಅವರ್ಣನೀಯ. ಇಲ್ಲಿಯವರೆಗೂ 45 ಸಿನಿಮಾಗಳನ್ನ ಮಾಡಿ ಮುಗಿಸಿರೋ ಈ ಆಲ್ ಇಂಡಿಯಾ ಕಟೌಟ್, ಸದ್ಯ 46ನೇ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಡೆಮೊನ್ ಟೀಸರ್​ನಿಂದ ಕಿಚ್ಚ 46 ಟಾಕ್ ಆಫ್ ದಿ ನೇಷನ್ ಆಗಿದೆ.

ಇದನ್ನು ಓದಿ : ಕಿಚ್ಚ ಸುದೀಪ್​ ಹುಟ್ಟುಹಬ್ಬ ಆಚರಣೆಗೆ ಭರ್ಜರಿ ಸಿದ್ದತೆ!

ಮೂರು ವರ್ಷಗಳಿಂದ ಬರ್ತ್ ಡೇಗೆ ಬ್ರೇಕ್ ಹಾಕಿದ್ದ ಕಿಚ್ಚ, ಈ ಬಾರಿ ಅಂದ್ರೆ ಇದೇ ಸೆಪ್ಟೆಂಬರ್ 2ಕ್ಕೆ 52ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಕೊರೋನಾ, ಅಪ್ಪು ಅಗಲಿಕೆಯಿಂದ ಸೆಲೆಬ್ರೇಷನ್ ಬೇಡ ಅಂದಿದ್ದ ಕಿಚ್ಚ, ಈ ಬಾರಿ ಅದ್ಧೂರಿ ಹಾಗೂ ಅವಿಸ್ಮರಣೀಯ ಸಂಭ್ರಮಕ್ಕೆ ಸಾಕ್ಷಿ ಆಗ್ತಿದ್ದಾರೆ. ಸೆಪ್ಟೆಂಬರ್ 1ರ ರಾತ್ರಿ 10 ಗಂಟೆಯಿಂದ ಮಿಡ್ ನೈಟ್ 12.30ರ ತನಕ ಕಿಚ್ಚ ಅಭಿಮಾನಿಗಳ ಜೊತೆ ಕಾಲ ಕಳೆಯಲಿದ್ದು, ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಕಿಚ್ಚೋತ್ಸವ ಗ್ರ್ಯಾಂಡ್ ಆಗಿ ನಡೆಯಲಿದೆ.

ಸಾಲು ಸಾಲು ಸರ್​ಪ್ರೈಸ್ ಗಿಫ್ಟ್

ವಿಶೇಷ ಅಂದ್ರೆ ಕಿಚ್ಚನ ಬರ್ತ್ ಡೇ ಕಿಚ್ಚ @50 ಅನ್ನೋ ಟೈಟಲ್​​ನಲ್ಲಿ 50ರ ಹರೆಯದ ಕಿಚ್ಚ ಅಂತ ಸೆಲೆಬ್ರೇಟ್ ಮಾಡಲಾಗ್ತಿದೆ. ಇನ್ನು ಸುದೀಪ್​ಗೆ ನಿರ್ದೇಶಕರು ನಿರ್ಮಾಪಕರುಗಳು ಸಾಲು ಸಾಲು ಸರ್​ಪ್ರೈಸ್ ಗಿಫ್ಟ್​​ಗಳನ್ನ ನೀಡಲಿದ್ದು, ಆ ಪೈಕಿ ಮಿಡ್​ನೈಟ್ ಲಾಂಚ್ ಆಗೋ ಕಿಚ್ಚ 46 ಚಿತ್ರದ ಟೈಟಲ್ ಟೀಸರ್ ಕೂಡ ಒಂದು. ಅಲ್ಲದೆ ಮೂರು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಹಾಗೂ ಗ್ಲೋಬಲ್ ಸಿನಿಮಾಗಳು ಅನೌನ್ಸ್ ಆಗ್ತಿವೆ.

ಡೆಮೊನ್ ಅಸಲಿ ಹೆಸ್ರು ರಿವೀಲ್ ಜೊತೆಗೆ ಕೆಆರ್​ಜಿ ಸ್ಟುಡಿಯೋಸ್​ನಡಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣದ ಸಿನಿಮಾ ಅನೌನ್ಸ್ ಆಗಿದೆ. ಇದು ಕೆಆರ್​ಜಿ ಬಿಗ್ ಪ್ರಾಜೆಕ್ಟ್​ ಆಗಿದ್ದು, ಕಿಚ್ಚ ಸುದೀಪ್ ಅವ್ರೇ 9 ವರ್ಷಗಳ ನಂತ್ರ ಡೈರೆಕ್ಷನ್ ಮಾಡಲಿದ್ದಾರಂತೆ. ಈ ನ್ಯೂಸ್ ಸದ್ಯ ಎಲ್ಲಾ ಅಭಿಮಾನಿಗಳ ದಿಲ್ ದೋಚಿದೆ.

ಕಿಚ್ಚನ ಗ್ಲೋಬಲ್ ಸಿನಿಮಾ ಅನೌನ್ಸ್​?

ತೆಲುಗಿನ ಪ್ರತಿಷ್ಠಿತ ಸತ್ಯ ಜ್ಯೋತಿ ಫಿಲಂಸ್ ಬ್ಯಾನರ್​ನಡಿ ತಮಿಳಿನ ಚೇರನ್ ಒಂದು ಸಿನಿಮಾನ ಸುದೀಪ್​ಗೆ ಡೈರೆಕ್ಟ್ ಮಾಡಲಿದ್ದಾರೆ. ಇವೆಲ್ಲಕ್ಕಿಂತ ಬಿಗ್ ನ್ಯೂಸ್ ಏನಪ್ಪಾ ಅಂದ್ರೆ, ಕಿಚ್ಚನ ಗ್ಲೋಬಲ್ ಸಿನಿಮಾ. ಇದನ್ನ ಕಬ್ಜ ಖ್ಯಾತಿಯ ಆರ್ ಚಂದ್ರು ನಿರ್ದೇಶಿಸಲಿದ್ದು, ಎಸ್.ಎಸ್ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಿದ್ದಾರೆ. ಇದನ್ನ ಆರ್​​ಸಿ ಮೂವೀಸ್ ಬ್ಯಾನರ್​ನಡಿ ಪ್ಯಾಷನೇಟ್ ಡೈರೆಕ್ಟರ್ ಆರ್ ಚಂದ್ರು ಪ್ರೊಡ್ಯೂಸ್ ಮಾಡಲಿದ್ದಾರೆ, ಜೊತೆಗೆ ಆಕ್ಷನ್ ಕಟ್ ಕೂಡ ಹೇಳಲಿದ್ದಾರೆ. ಕಿಚ್ಚನ ಬರ್ತ್ ಡೇಗೆ ಅನೌನ್ಸ್ ಆಗ್ತಿರೋ ಈ ಪ್ರಾಜೆಕ್ಟ್ ಕುತೂಹಲ ಮೂಡಿಸಿದೆ.

ಇನ್ನು ಸೆಪ್ಟೆಂಬರ್ 2ರ ಬೆಳಗ್ಗೆ ಜೆಪಿ ನಗರದ ಕಿಚ್ಚನ ನಿವಾಸದ ಮುಂದೆಯೂ ಅಭಿಮಾನಿಗಳು ಹಾಗೂ ಹಿತೈಷಿಗಳನ್ನ ಸುದೀಪ್ ಭೇಟಿ ಮಾಡಲಿದ್ದಾರೆ. ಈ ಬಾರಿಯ ಕಿಚ್ಚೋತ್ಸವ ದೊಡ್ಡ ಮಟ್ಟಕ್ಕೆ ಕಿಚ್ಚತ್ತಿಸಲಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES