Monday, December 23, 2024

ಕಿಚ್ಚನ ಹುಟ್ಟುಹಬ್ಬಕ್ಕೆ ಅರಸು ಕ್ರಿಯೇಷನ್ಸ್ ಪ್ರೀತಿಯ ಉಡುಗೊರೆ

ಬೆಂಗಳೂರು : ಕಿಚ್ಚನ ಹುಟ್ಟುಹಬ್ಬದ ಹಿನ್ನೆಲೆ ಅರಸು ಕ್ರಿಯೆಷನ್ ಅವರು ಉಡುಗೊರೆಯ ನೆಪದಲ್ಲಿ ಆಕಾಶದ ನಕ್ಷತ್ರಕ್ಕೆ ಸುದೀಪ್ ಹೆಸರನ್ನು ನಾಮಕರಣ ಮಾಡಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸೆ.2ರಂದು 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆ ಕಿಚ್ಚೋತ್ಸವ ಈಗಾಗಲೇ ಫ್ಯಾನ್ಸ್ ಸಜ್ಜಾಗಿದ್ದಾರೆ. ಅದಲ್ಲದೆ ಈ ಭಾರಿ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ಅಭಿಮಾನಿಗಳೊಟ್ಟಿಗೆ ತಮ್ಮ ಜನ್ಮದಿನವನ್ನು ಸಂಭ್ರಮಿಸಲಿದ್ದಾರೆ.

ಇದನ್ನು ಓದಿ : ಕುಮಾರಣ್ಣ ಹುಷಾರಾಗಿ ಇದ್ದಾರೆ : ಸಾ.ರಾ ಮಹೇಶ್

ಕಿಚ್ಚನ ಜನ್ಮದಿನದ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನೆಚ್ಚಿನ ಸ್ಟಾರ್ಸ್​ ಹುಟ್ಟುಹಬ್ಬಕ್ಕೆ ಕಿಚ್ಚನ ಗುಣಗಾನ ಮಾಡುವ ಸ್ಫೆಷಲ್ ಹಾಡುಗಳು ಯೂಟ್ಯೂಬ್​ನ ಅಂಗಳ ಪ್ರವೇಶಿಸಿವೆ. ಅದು ಅಷ್ಟೇ ಅಲ್ಲದೆ ಅರಸು ಕ್ರಿಯೇಷನ್ಸ್ ಸುದೀಪ್ 50ನೇ ವಿಶೇಷ ಉಡುಗೊರೆ ನೀಡಿದೆ.

ರತ್ನಗಳಲ್ಲಿ ನೀನೆ ಅತ್ಯಮೂಲ್ಯ

ಕಳೆದ ಎರಡು ವರ್ಷಗಳಿಂದ PRO ಆಗಿ ಕನ್ನಡ ಮಾಧ್ಯಮದ ನಡುವೆ ಕೆಲಸ ಮಾಡುತ್ತಿರುವ ಹರೀಶ್ ಅರಸು. ಇವರು ತಮ್ಮದೇ ಅರಸು ಕ್ರಿಯೇಷನ್ಸ್ ನಡಿಯಲ್ಲಿ ಆಕಾಶದ ನಕ್ಷತ್ರಕ್ಕೆ ಕಿಚ್ಚ ಸುದೀಪ್ ಎಂದು ನಾಮಕರಣ ಮಾಡುವ ಮೂಲಕ ಕಿಚ್ಚನ ಹುಟ್ಟುಹಬ್ಬಕ್ಕೆ ಪ್ರೀತಿಯ ಉಡುಗೊರೆ ನೀಡಿದ್ದಾರೆ. ಮತ್ತು ಈ ಜಗತ್ತಿನಲ್ಲಿರುವ ರತ್ನಗಳಲ್ಲಿ ನೀನೆ ಅತ್ಯಮೂಲ್ಯ. ಇಂದು ನಕ್ಷತ್ರ ಹುಟ್ಟಿದ ದಿನವನ್ನು ನಾವು ಆಚರಿಸುತ್ತೇವೆ, ಆದರೆ ಆಕಾಶದಲ್ಲಿ ಅಲ್ಲ ಭೂಮಿಯಲ್ಲಿ ಎಂಬ ಅರ್ಥಪೂರ್ಣ ಸಂದೇಶದ ಮೂಲಕ ಕಿಚ್ಚನಿಗೆ ಅರಸು ಕ್ರಿಯೇಷನ್ಸ್ ಮನದುಂಬಿ ಶುಭಾಶಯ ಕೋರಿದ್ದಾರೆ.

ಜೆ.ಪಿ ನಗರದಲ್ಲೂ ಕಿಚ್ಚನ ಕಿಚ್ಚೋತ್ಸವ

46ನೇ ಸಿನಿಮಾದ ಟೈಟಲ್ ಕಿಚ್ಚ ಸುದೀಪ್ ಅವರ ಬರ್ತ್​ ಡೇ ದಿನದೊಂದು ರಿವೀಲ್ ಆಗಲಿದೆ. ಮಧ್ಯರಾತ್ರಿ 12ಕ್ಕೆ ಶೀರ್ಷಿಕೆ ಘೋಷಣೆಯಾಗಲಿದೆ. ಈ ಮೊದಲು ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ಮಾತ್ರ ಜನ್ಮದಿನ ಆಚರಿಸಿಕೊಳ್ತಾರೆ, ಮನೆ ಬಳಿ ಯಾವುದೇ ಸಂಭ್ರಮ ಇರುವುದಿಲ್ಲ ಎಂದಿದ್ದ ಕಿಚ್ಚ. ಆದರೆ ಈಗ ಜೆಪಿ ನಗರದಲ್ಲಿಯೂ ಕಿಚ್ಚನ ಕಿಚ್ಚೋತ್ಸವ ನಡೆಯಲಿದೆ.

RELATED ARTICLES

Related Articles

TRENDING ARTICLES