Thursday, December 19, 2024

ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ

ಕಾರವಾರ : ಮನೆಗಳ ಹೊರಗೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದ ಕದೀಮರನ್ನು ಬಂಧಿಸಿದ ಪೋಲಿಸ್ ಪಡೆ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.

ಮಹ್ಮದ್ ಸಲ್ಮಾನ್ ಗೌಸ್ (23) ಹಾಗೂ ರೋಹಿತ್ ಹರಿಜನ್ (21) ಬಂಧಿತ ಆರೋಪಿಗಳು. ಕೆಲವು ದಿನಗಳಿಂದ ನಗರದಲ್ಲಿ ಮನೆಯ ಅಂಗಳದಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕದೀಯುವುದೇ ಇವರ ಕೆಲಸವಾಗಿತ್ತು.

ಇದನ್ನು ಓದಿ : ಕೀಟನಾಶಕ ಸುರಿದು ಬೆಳ್ಳುಳ್ಳಿ ಬೆಳೆ ನಾಶ ಮಾಡಿದ ಕೀಡಿಗೇಡಿಗಳು

ಇದರ ಬೆನ್ನಲ್ಲೇ ಹಿರೇಗುತ್ತಿ, ವಂದಿಗೆ, ಜಮಗೋಡ ಮತ್ತು ಶೆಟಗೇರಿಯವರ ಮನೆಯಲ್ಲಿ ವಾಹನಗಳ ಕಳ್ಳತನ ಮಾಡುತ್ತಿದ್ದ ವೇಳೆ ಸಿಪಿಐ ಸಂತೋಷ ಶೆಟ್ಟಿಯವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಪಿಎಸ್ಐ ಪ್ರಭಾಕರ್ ಹಾಗೂ ಉದ್ದಪ್ಪ ಧರೆಪ್ಪನವರ ತಂಡಗಳು ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೋಲಿಸರ ಕಾರ್ಯಾಚರಣೆಯಿಂದ ನಗರದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಬಂಧಿಸಿದ ಆರೋಪಿಗಳಿಂದ ಕದ್ದಿದ್ದ 2 ಬೈಕ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನಾ ಸಂಬಂಧ ಅಂಕೋಲಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES