Friday, April 4, 2025

ಚಂದ್ರಯಾನ ಚಂದ್ರನ ಮುಟ್ಟಿತು, ಆದ್ರೂ ವಿಪಕ್ಷ ನಾಯಕನ ಆಯ್ಕೆ ಆಗ್ತಿಲ್ಲ : ಪ್ರಿಯಾಂಕ್ ಖರ್ಗೆ

ಕಲಬುರಗಿ : ಚಂದ್ರಯಾನ-3 ಚಂದ್ರ ಮುಟ್ಟಿತು. ಆದ್ರೆ, ದೆಹಲಿಯಿಂದ ವಿರೋಧ ಪಕ್ಷದ ನಾಯಕನ ಆಯ್ಕೆ ಆಗ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರದ 100 ದಿನ ಬಗ್ಗೆ ಚಾರ್ಚ್​ಶೀಟ್ ಬಿಡುಗಡೆ ಕುರಿತು ಕಲಬುರಗಿಯಲ್ಲಿ ಮಾತನಾಡಿರುವ ಅವರು, ಬಿಜೆಪಿಯವರಿಗೆ ಏನು ಮಾಡಬೇಕು ಅಂತ ಅರ್ಥವಾಗ್ತಿಲ್ಲ. ಅವರು ಅಧಿಕಾರ ಕಳೆದುಕೊಂಡ 100 ದಿನ ಆಯ್ತು ಎಂದು ಕುಟುಕಿದ್ದಾರೆ.

ನಾವು ನಮ್ಮ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡೋ ನೈತಿಕತೆ ಬಿಜೆಪಿಗಿಲ್ಲ. ಬಿಜೆಪಿಯವರು ಬ್ಯಾರಿಕೇಡ್ ಬಂಧಿಗಳಾಗಿದ್ದಾರೆ. ಬೆಂಗಳೂರಿಗೆ ಮೋದಿ ಬಂದ್ರು ಅವರನ್ನು ಭೇಟಿ ಮಾಡಲು ಆಗಿಲ್ಲ. ಹೀಗಿರುವಾಗ ರಾಜ ದರ್ಬಾರ್​ಗೆ ಹೋಗಿ ಇವರು ಏನು ಹೇಳ್ತಾರೆ?ಎಂದು ಚಾಟಿ ಬೀಸಿದ್ದಾರೆ.

ಎಲ್ಲಿ ಹೋಯ್ತು ಪೆನ್​ಡ್ರೈವ್

ಇದೇ ಬೊಮ್ಮಾಯಿ ಅವರು ಸಿಎಂ ಇದ್ದಾಗ ಏನ ಹೇಳಿದ್ರು, ದಾಖಲೆ ಕೊಡಿ ಅಂತಿದ್ರು. ಇದೀಗ ಬೊಮ್ಮಾಯಿ ಅವರ ಆರೋಪಕ್ಕೆ ಯಾವ ದಾಖಲೆಗಳಿವೆ. ಎಲ್ಲಿ ಹೋಯ್ತು ಪೆನ್​ಡ್ರೈವ್, ಆಡಿಯೋ ಬಾಂಬ್​ಗಳು. ಗುತ್ತಿಗೆದಾರರೇ ಈ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡಿಲ್ಲ. ಬಿಲ್​ಗಳು ಮಾತ್ರ ವಿಳಂಬವಾಗ್ತಿವೆ ಅಂತ ಹೇಳಿದ್ದಾರೆ. ಬಿಲ್ ಕೊಡದೇ ಇದ್ರೆ ಕೆಲಸ ಮಾಡಬೇಡಿ ಎಂದು ಛೇಡಿಸಿದ್ದಾರೆ.

ಚುನಾವಣೆ ಮುನ್ನ ಬಿಜೆಪಿಯೇ ಇರಲ್ಲ

ಪಿಡಿಓ ವರ್ಗಾವಣೆ ಪಟ್ಟಿ ಸೋರಿಕೆ ಆಗಿರೋದು ನಿಜ. ಈ ಬಗ್ಗೆ ಸೈಬರ್ ಸೆಲ್​ಗೆ ದೂರು  ನೀಡಿದ್ದು, ನಾವೇ ತನಿಖೆಗೆ ನೀಡಿ ನಾವೇ ದುಡ್ಡು ಕೇಳ್ತೇವಾ? ಲೋಕಸಭಾ ಚುನಾವಣೆ ಮುನ್ನ ಬಿಜೆಪಿಯೇ ಇರಲ್ಲ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಸೈದ್ಧಾಂತಿಕವಾಗಿಯೂ ಇರಲ್ಲ, ಪಕ್ಷದಲ್ಲಿಯೂ ಇರಲ್ಲ. ಅಧಿಕಾರ ಇಲ್ಲದೇ ಇದ್ದಿದ್ದಕ್ಕೆ ನೀರಿನಿಂದ ಹೊರಬಂದಂತೆ ಬಿಜೆಪಿಯವರು ಮಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.

RELATED ARTICLES

Related Articles

TRENDING ARTICLES