ಟೋಕಿಯೋ : ಚಂದ್ರನ ಅಧ್ಯಯನಕ್ಕಾಗಿ ಜಪಾನ್ ಹಾರಿಬಿಡಲು ಉದ್ದೇಶಿಸಿದ್ದ ಚಂದ್ರಯಾನ ನೌಕೆ ‘ಮೂನ್ ಸ್ನೈಪರ್ ’ ಉಡ್ಡಯನವನ್ನು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ 3ನೇ ಬಾರಿ ಮುಂದೂಡಲಾಗಿದೆ.
ಕಾರ್ಯಕ್ರಮದ ಅನ್ವಯ ಸೋಮವಾರ ಬೆಳಗ್ಗೆ 5.25ಕ್ಕೆ ಮೂನ್ ಸ್ಟೈಪರ್ ನೌಕೆಯನ್ನು ಉಡ್ಡಯನ ಮಾಡ ಬೇಕಿತ್ತು. ಆದರೆ ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಉಡ್ಡಯನಕ್ಕೂ ಕೇವಲ 30 ನಿಮಿಷಗಳ ಮೊದಲು ಉಡ್ಡಯನ ರದ್ದುಪಡಿಸಿದ್ದಾಗಿ ಮಿಟ್ಟುಬಿಷಿ ಹೆಎ ಇಂಡಸ್ಟ್ರೀಸ್ ಲಿ. ಘೋಷಣೆ ಮಾಡಿತು. ಆದರೆ ಹೊಸ ಉಡ್ಡಯನದ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.
ಇದನ್ನೂ ಓದಿ: ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ : ಚಕ್ರಪಾಣಿ ಮಹಾರಾಜ
ತಕ್ಷಣಕ್ಕೆ ನೌಕೆ ಉಡ್ಡಯನವಾದರೂ ಅದು ಚಂದ್ರನ ಮೇಲೆ ಇಳಿಯಲು ಕನಿಷ್ಠ 4-6 ತಿಂಗಳು ತೆಗೆದುಕೊಳ್ಳಲಿದೆ, ಈ ಯೋಜನೆ ಎಕ್ಸ್ ರೇ ಮಿಶನ್ ಹಾಗೂ ಚ೦ದ್ರನ ಮೇಲೆ ಲ್ಯಾಂಡರ್ ಇಳಿಸುವ ಪ್ರಕ್ರಿಯೆಗಳನ್ನು ಒಳಗೊಂಡಿದೆ.