ವಾಷಿಂಗ್ಟನ್: ಅಮೆರಿಕದ ದಕ್ಷಿಣ ರಾಜ್ಯಗಳಲ್ಲಿ 2020ರ ಸಾರ್ವತ್ರಿಕ ಚುನಾವಣೆ ವೇಳೆ ಫಲಿತಾಂಶವನ್ನು ಬುಡಮೇಲು ಮಾಡುವ ಉದ್ದೇಶದಿಂದ ಚುನಾವಣಾ ಅಕ್ರಮ ಮತ್ತು ಪಿತೂರಿ ಎಸಗಿದ ಆರೋಪದಲ್ಲಿ
ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಿ ಜಾರ್ಜಿಯಾ ಜೈಲಿನಲ್ಲಿ ಇರಿಸಲಾಗಿದೆ.
ಇದನ್ನೂ ಓದಿ : ನಾಳೆ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಮೋದಿ ಆಗಮನ!
ಸುಮಾರು 30 ನಿಮಿಷಗಳ ವಿಚಾರಣಾ ಅವಧಿಯಲ್ಲಿ ಅಟ್ಲಾಂಟಾ ಫಲ್ಟನ್ ಕೌಂಟಿ ಜೈಲಿನಲ್ಲಿ 77 ವರ್ಷ ವಯಸ್ಸಿನ ಟ್ರಂಪ್ ವಿರುದ್ಧ 13 ಆರೋಪಗಳನ್ನು ದಾಖಲಿಸಲಾಗಿದೆ ಎಂದು ಶೆರೀಫ್ ಕಚೇರಿ ತನ್ನ ಪ್ರಕಟಣೆ ಹೇಳಿದೆ.
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದ ಅವರು, ನನ್ನ ಮೇಲೆ ಮಾಡಿರುವ ಆರೋಪಗಳನ್ನು ಎದುರಿಸು ಸಲುವಾಗಿ ನಾನೆ ಖುದ್ದಾಗಿ ಜಾರ್ಜಿಯಾ ಅಧಿಕಾರಿಗಳಿಗೆ ಶರಣಾಗುವುದಾಗಿ ಬರೆದುಕೊಂಡಿದ್ದರು.
https://t.co/MlIKklPSJT pic.twitter.com/Mcbf2xozsY
— Donald J. Trump (@realDonaldTrump) August 25, 2023