ನವದೆಹಲಿ : 2024ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿ-ವೋಟರ್ ಸಮೀಕ್ಷೆ ಬಹಿರಂಗಪಡಿಸಿದೆ.
ಎನ್ಡಿಎ(NDA) 306 ಸೀಟು, I.N.D.I.A. ಒಕ್ಕೂಟ 193 ಹಾಗೂ ಇತರರು 44 ಸೀಟುಗಳನ್ನು ಪಡೆಯಲಿದ್ದಾರೆ. ಬಿಜೆಪಿ(BJP) 287, ಕಾಂಗ್ರೆಸ್ 74, ಇತರರು 182 ಸ್ಥಾನ ಪಡೆಯಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಎನ್ಡಿಎ 296ರಿಂದ 326 ಸೀಟು, I.N.D.I.A. ಒಕ್ಕೂಟ 160ರಿಂದ 190, ಬಿಜೆಡಿ 12ರಿಂದ 14 ಹಾಗೂ ಇತರರು 11ರಿಂದ 14 ಸೀಟುಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದೆ.
ಇನ್ನೂ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎನ್ಡಿಎ 25 ಸ್ಥಾನ, ಕಾಂಗ್ರೆಸ್ ಕೇವಲ 1 ಸ್ಥಾನ ಪಡೆದುಕೊಂಡಿತ್ತು.
ಒಟ್ಟು ಬಲಾಬಲ : 543
ಪ್ರಸ್ತುತ ಬಲ : 540
ಎನ್ಡಿಎ (NDA) : 340
ಇಂಡಿಯಾ (I.N.D.I.A) : 140
ಇತರೆ : 60
ಬಹುಮತ : 271