ಬೆಂಗಳೂರು : ಸಿಲಿಂಡರ್ ಸ್ಪೋಟಗೊಂಡು ಒರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಡೈರಿಸರ್ಕಲ್ ಬಳಿ ಇರುವ ಪೋಲಮ್ಮಸ್ ಮೆಸ್ವೊಂದರಲ್ಲಿ ನಡೆದಿದೆ.
ನಗರದ ಕಟ್ಟಡವೊಂದರಲ್ಲಿ ಮೊದಲ ಮಹಡಿಯಲ್ಲಿ ಪೋಲಮ್ಮಸ್ ಮೆಸ್ ನಡೆಸುತ್ತಿದ್ದರು. ಇಂದು ಬೆಳಗ್ಗೆ 9 ಗಂಟೆಯಲ್ಲಿ ಎಂದಿನಂತೆ ಟಿಫನ್ ರೆಡಿ ಮಾಡುತ್ತಿದ್ದ ಅಡುಗೆ ಭಟ್ಟರು. ಈ ವೇಳೆ ಒಂದು ಸಿಲಿಂಡರ್ ಸ್ಪೋಟಗೊಂಡಿದ್ದು, ಸಿಲಿಂಡರ್ ಪಕ್ಕ ಮಲಗಿದ್ದ ರವಿ (45) ಎಂಬಾತ ಮೃತ ದುರ್ದೈವಿ ಸಾವನ್ನಪ್ಪಿದ್ದಾನೆ.
ಇದನ್ನು ಓದಿ : ಮದುವೆ ಮಾಡು ಎಂದ ಮಗನನ್ನೇ ಕೊಂದ ತಂದೆ!!
ಇನ್ನು ಮೊದಲ ಮಹಡಿಯಲ್ಲಿ ಅಡುಗೆ ಮಾಡುತ್ತಿದ್ದ ನಾಗರಾಜ್ ಹಾಗೂ ರೋಮಯ್ಯ ಚೋರ್ಲಾ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಕೆಳ ಮಹಡಿಯಲ್ಲಿ ಒಟ್ಟು 10 ಕಮರ್ಷಿಯಲ್ ಸಿಲಿಂಡರ್ಗಳನ್ನು ಇರಿಸಲಾಗಿದ್ದು, ಅದೃಷ್ಟವಶಾತ್ ಉಳಿದ ಸಿಲಿಂಡರ್ಗಳಿಗೆ ಯಾವುದೇ ಹಾನಿಯಾಗಿಲ್ಲ.