ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಹೊಸ ಹೊಸ ರೀತಿಯ ಸೈಬರ್ ಕ್ರೈಮ್ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದು ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಇತ್ತೀಚೆಗೆ ಎಲ್ಲೆಡೆ ಡಿಜಿಟಲ್ ಕ್ರಾಂತಿಯಿಂದಾಗಿ ಸ್ಮಾರ್ಟ್ ಪೇಮೆಂಟ್ ಆಪ್ಷನ್ ಗೆ ಎಲ್ಲರು ಹೆಚ್ಚು ಒಗ್ಗಿಕೊಂಡಿದ್ದಾರೆ. ಅದರಲ್ಲೂ ಕ್ಯೂಆರ್ ಕೋಡ್ ಸಂಬಂಧಿತ ಸೈಬರ್ ಕ್ರೈಮ್ ಪ್ರಕರಣಗಳೇ ಪೊಲೀಸರಿಗೆ ಹೆಚ್ಚು ತಲೆನೋವು ತರಿಸುತ್ತಿದೆ.
ಇದನ್ನು ಓದಿ: ಅಕ್ರಮ ಆಸ್ತಿ ಪತ್ತೆ ಪ್ರಕರಣ: ಕೆ.ಟಿ ಶ್ರೀನಿವಾಸ್ ಬಂಧನ!
ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 2017 ರಿಂದ ಇಲ್ಲಿಯವರೆಗೆ 50,000 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 20,662 ಪ್ರಕರಣಗಳು ಕ್ಯೂ ಆರ್ ಕೋಡ್ ಸ್ಕ್ಯಾಮ್ಗಳದ್ದಾಗಿದೆ.
ಡೆಬಿಟ್ ಕಾರ್ಡ್ ದುರುಪಯೋಗ, ವಂಚಕ ಲಿಂಕ್ (FraudLink) ಇತ್ಯಾದಿ ಅಡ್ಡದಾರಿಗಳ ಮೂಲಕ ಹಣ ಲಪಟಾಯಿಸುವ ಪ್ರಕರಣಗಳೇ ಆಗಿವೆ. ಒಟ್ಟಾರೆ ಸೈಬರ್ ಕ್ರೈಮ್ ಪ್ರಕರಣಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಕ್ಯೂಆರ್ ಕೋಡ್ ವಂಚನೆ ಪ್ರಕರಣಗಳೇ ಆಗಿದೆ.