Sunday, November 24, 2024

‘ಚಂದ್ರ’ ಚುಂಬನಕ್ಕೆ ಕ್ಷಣಗಣನೆ : ಚಂದ್ರಯಾನ-3 ಯಶಸ್ಸಿಗೆ ಸರ್ವ ಸಿದ್ದಿಯಾಗ

ಬೆಂಗಳೂರು : ಆಗಸ್ಟ್​ -23 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ. 40 ದಿನಗಳಿಂದ ಇಡೀ ಭಾರತವೇ ಚಾತಕ ಪಕ್ಷಿಯಂತೆ ಎದುರು ನೋಡುತ್ತಾ ಕುಳಿತಿದೆ. ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿರುವ ವಿಕ್ರಮ್​ ಲ್ಯಾಂಡರ್​ ಇನ್ನೇನಿದ್ದರೂ ಚಂದ್ರನ ಮೇಲೆ ಕಾಲು ಇಡೋದೊಂದೇ ಬಾಕಿ.

ಈ ಐತಿಹಾಸಿಕ ಕ್ಷಣಕ್ಕಾಗಿ ಇಡೀ ವಿಶ್ವವೇ ಭಾರತದತ್ತ ಕಣ್ಣರಳಿಸಿ ನೋಡುತ್ತಿದೆ. ಅದರಲ್ಲೂ ರಷ್ಯಾದ ಲೂನಾ-25 ಚಂದ್ರಯಾನ ವಿಫಲವಾದ ಬಳಿಕ, ಭಾರತದ ಚಂದ್ರಯಾನ-3 ಯೋಜನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಸದ್ಯ ಚಂದ್ರನ ಮೇಲ್ಮೈನ 25 ಕಿ.ಮೀ. ದೂರದಲ್ಲಿರುವ ವಿಕ್ರಮ್​ ಲ್ಯಾಂಡರ್ ​ಅನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡ್​ ಮಾಡಿಸಲು ಇಸ್ರೋ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ವಿಜಯಪುರದಲ್ಲಿ ಸರ್ವ ಸಿದ್ದಿಯಾಗ

ಚಂದ್ರಯಾನ-3 ಯಶಸ್ಸಿಗಾಗಿ ವಿಜಯಪುರ ನಗರದಲ್ಲಿ ಇಂದು ಬೆಳಗ್ಗೆಯಿಂದಲೇ ಯುವ ಭಾರತ ಸಂಘಟನೆ ನೇತೃತ್ವದಲ್ಲಿ ಹೋಮ-ಹವನ ಹಮ್ಮಿಕೊಳ್ಳಲಾಗಿತ್ತು. ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ತಲುಪಲಿ‌ ಎಂದು 8 ಜನ ಅರ್ಚಕರು ಹಾಗೂ 15 ವಿದ್ಯಾರ್ಥಿಗಳ ನೇತೃತ್ವದಲ್ಲಿ ವಿಜಯಪುರದ ನರಸಿಂಹ ಸ್ವಾಮಿ ವಿದ್ಯಾಪೀಠದಲ್ಲಿ ಸರ್ವ ಸಿದ್ದಿಯಾಗ ನಡೆಸಲಾಯಿತು.

ಮೈಸೂರಿನಲ್ಲಿ ವಿಶೇಷ ಹೋಮ‌, ಹವನ

ಚಂದ್ರಯಾನ-3 ಯಶಸ್ವಿಯಾಗಲೆಂದು 140 ಕೋಟಿ ಭಾರತೀಯರು ಪ್ರಾರ್ಥಿಸುತ್ತಿದ್ದು, ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಗುರಿ ತಲುಪಲೆಂದು ಮೈಸೂರಿನಲ್ಲಿ ಸರ್ವಸಿದ್ಧಿಯಾಗ ಮಾಡಿದ್ದಾರೆ. ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವಂತೆ ಮೈಸೂರು ನಾಗರಿಕರ ತಂಡ ವಿಶೇಷ ಪೂಜೆ ಮಾಡಿಸಿದೆ. ದೇಗುಲದ ಅರ್ಚಕರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ವಿಶೇಷ ಹೋಮ‌, ಹವನ ನಡೆಸಿ ಚಂದ್ರಯಾನ-3ಕ್ಕೆ ಶುಭಾಶಯ ಕೋರಲಾಯಿತು.

RELATED ARTICLES

Related Articles

TRENDING ARTICLES