ಅಸ್ಸಾಂ : ಅಸ್ಸಾಂನಲ್ಲಿ ರಾಜ್ಯದಲ್ಲಿ ಬಹುಪತ್ನಿತ್ವವನ್ನು ಕೊನೆಗೊಳಿಸುವ ಉದ್ದೇಶ ಹೊಂದಿರುವ ಸರ್ಕಾರ, ಕಾನೂನಿನ ಕುರಿತು ರಾಜ್ಯದ ಬಿಜೆಪಿ ಸರ್ಕಾರವು ಸಾರ್ವಜನಿಕರಿಂದ ಅಭಿಪ್ರಾಯ ಕೇಳಿದೆ.
ಈ ಬಗ್ಗೆ ಟ್ವಿಟರ್‌ನಲ್ಲಿ (ಈಗಿನ ಸಾರ್ವಜನಿಕ ನೋಟಿಸ್ ಹಂಚಿಕೊಂಡಿ ರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ‘ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧಿಸುವ ಉದ್ದೇಶಿತ ಕಾನೂನಿನ ಬಗ್ಗೆ ನಿಮ್ಮ ಸಲಹೆಗಳನ್ನು ಕಳಿಸಿ’ ಎಂದು ಜನತೆಗೆ ಮನವಿ ಮಾಡಿದ್ದಾರೆ. ಜನರು ತಮ್ಮ ಅಭಿಪ್ರಾಯವನ್ನು ಆ.30ರೊಳಗೆ ಇ-ಮೇಲ್ ಅಥವಾ ಅಂಚೆ ಮೂಲಕ ಕಳುಹಿಸಲು ಕೋರಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಇಂದಿನಿಂದ 3 ದಿನ ವಿದ್ಯುತ್ ಶಾಕ್!
ಬಹುಪತ್ನಿತ್ವ ನಿಷೇಧಿಸುವ ಕಾನೂನನ್ನು ಜಾರಿಗೆ ತರಲು ವಿಧಾನಸಭೆಗೆ ಇರಬಹುದಾದ ಅಧಿಕಾರದ ಬಗ್ಗೆ ಅಧ್ಯಯನಕ್ಕೆ ಅಸ್ಸಾಂ ಸರ್ಕಾರ ತಜ್ಞರ ಸಮಿತಿ ರಚಿಸಿತ್ತು. ಆ ವರದಿಯು, ಬಹುಪತ್ನಿತ್ವ ನಿಷೇಧ ಕಾಯ್ದೆ ಜಾರಿ ಗೊಳಿಸಲು ರಾಜ್ಯ ಶಾಸಕಾಂಗವು ಸಮರ್ಥವಾಗಿದೆ ಎಂದು ಹೇಳಿದೆ. ವಿವಾಹವು ಸಮವರ್ತಿ ಪಟ್ಟಿಯಲ್ಲಿ ದ್ದು, ಕೇಂದ್ರ, ರಾಜ್ಯಗಳೆರಡೂ ಈ ಕುರಿತ ಕಾನೂನು ಅಂಗೀಕರಿಸಬಹುದು ಎಂದು ವರದಿ ಹೇಳಿದೆ. ಹೀಗಾಗಿ ಜನರು ಸಲಹೆ ನೀಡಬೇಕು’ ಎ೦ದು ಶರ್ಮ ಕೋರಿದ್ದಾರೆ.