Monday, December 23, 2024

ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ; ಮೂವರು ಆರೋಪಿಗಳ ಬಂಧನ

ರಾಮನಗರ : ಗಾಂಜಾ ಮಾರಾಟ ಮಾಡುತ್ತಿದ್ದ, ಮೂವರನ್ನು ಬಂಧಿಸಿದ ಪೋಲಿಸರು ಘಟನೆ ಮಾಗಡಿ ತಾಲೂಕಿನ ಪ್ರಥಮ ದರ್ಜೆ ಕಾಲೇಜು ಬಳಿ ನಡೆದಿದೆ.

ಕಳೆದ ಹಲವು ದಿನಗಳಿಂದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು. ಈ ಹಿನ್ನೆಲೆ ಮಾಗಡಿ ಪಟ್ಟಣದ ಶಿವು (21), ರವಿಕುಮಾರ್ (23) ಮತ್ತು ಹುಲಿಯೂರುದುರ್ಗದ ದಿನೇಶ್ (26) ಎಂಬ ಆರೋಪಿಗಳನ್ನು ಬಂಧಿಸಿದ ಪೋಲಿಸರು.

ಇದನ್ನು ಓದಿ : ಮಳೆಗಾಗಿ ದೇವರ ವಿಗ್ರಹಕ್ಕೆ ಬೆಂಕಿ!: ವಿಚಿತ್ರ ಆಚರಣೆ

ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿದಿನ ಗಾಂಜಾ ಮಾರಾಟ ಮಾಡುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚಾಗಿ ಗಾಂಜಾದಲ್ಲಿಯೇ ಮುಳುಗಿ ಹೋಗಿದ್ದರು. ಈ ವಿಚಾರದ ಬಗ್ಗೆ ಖಚಿತ ಮಾಹಿತಿ ತಿಳಿದಿದ್ದು, ತಕ್ಷಣವೇ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಬಳಿಕ ಬಂಧಿತ ಆರೋಪಿಗಳಿಂದ 650 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡ ಪೋಲಿಸರು. ಸದ್ಯ ಮಾಗಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES