ಬೆಂಗಳೂರು: ಇತ್ತೀಚೆಗೆ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಗ್ರಾಹಕರ ಜೇಬಿಗೆ ಹೆಚ್ಚಿನ ಹೊರೆ ಬಿದ್ದಿದೆ.
ಜುಲೈ ಎರಡನೇ ವಾರದಿಂದ ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಏರಿಕೆಯಾಗಿದ್ದು ರಾಯಚೂರು ಜಿಲ್ಲೆ, ಸಿಂಧಗಿ ತಾಲೂಕು ಗಂಗಾವತಿಯಲ್ಲಿ ಹೆಚ್ಚು ಅಕ್ಕಿ ಉತ್ಪಾದನೆಯೂ ಮಳೆ ಕಡಿಮೆಯಾದ ಹಿನ್ನೆಲೆ ಬಿತ್ತನೆ ಕಾರ್ಯ ಅಪೂರ್ಣ ವಾಗಿದೆ.
ಈಗಾಗಲೇ ಬೇಳೆ ಕಾಳು, ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು ಇದೀಗ ಅಕ್ಕಿ ಸರದಿ, ಬೆಂಗಳೂರು ಸೇರಿ ರಾಜ್ಯಾದ್ಯಂತ ಅಕ್ಕಿ ಬೆಲೆ ಏರಿಕೆಯಾಗಿದೆ, ಸದ್ಯ ರಾಜ್ಯದಲ್ಲಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದ್ದು ಪಂಜಾಬ್, ತಮಿಳುನಾಡಿನಿಂದ ಮಾತ್ರ ಅಕ್ಕಿ ಪೂರೈಕೆಯಾಗುತ್ತಿದೆ.
ಅಕ್ಕಿ ಹಿಂದಿನ ದರ ಈಗಿನ ದರ
ಸೋನಾ ಮಸೂರಿ ರಾ 58 ರೂ. 65 ರೂ.
ಸೋನಾ ಮಸೂರಿ 50 ರೂ. 60 ರೂ.
ಸೋನಾ ಸ್ಟೀಮ್ 45 ರೂ. 55 ರೂ.
ಐಆರ್ 8 35 ರೂ. 40 ರೂ.
ಜೀರಾ ರೈಸ್ 100 ರೂ. 20 ರೂ.
ಬಾಸ್ಮತಿ 140 ರೂ. 160 ರೂ.
ಬುಲೆಟ್ ರೈಸ್ 60 ರೂ. 70 ರೂ.
ರಾಜಮುಡಿ ಅಕ್ಕಿ 64 ರೂ. 74 ರೂ.