Sunday, November 24, 2024

ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಬಾಲಹುಳಗಳು ಪತ್ತೆ

ಬಾಗಲಕೋಟೆ : ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ನುಶಿ ಮತ್ತು ಬಾಲಹುಳಗಳು ಪತ್ತೆಯಾಗಿವೆ ಘಟನೆ ಜಿಲ್ಲೆಯ ಇಲಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಮಕ್ಕಳ ಪರಿಸ್ಥಿತಿ ಕೇಳೋವ್ರೂ ಇಲ್ಲ. ಬಿಸಿಯೂಟದಲ್ಲಿ ಅನ್ನಕ್ಕಿಂತ ಹೆಚ್ಚು ಕಂಡಿದ್ದೆ ಬಾಲಹುಳ. ಈ ಹಿಂದೆಯೂ ಅದೆಷ್ಟೋ ಸಾರಿ ಹುಳ ಪತ್ತೆಯಾಗಿದ್ದು, ಮಕ್ಕಳು ಆತಂಕಗೊಂಡು ಶಾಲೆಯ ಹೆಡ್ ಮಾಸ್ಟರ್ ಎಚ್. ಬಂಡಿವಡ್ಡರ್ ದಿವ್ಯ ಅವರ ಗಮನಕ್ಕೆ ತಂದಿದ್ದರು. ಆದ್ರೂ ಕೂಡ ವಿದ್ಯಾರ್ಥಿಗಳು ಗಮನಕ್ಕೆ ತಂದರೂ ನಿರ್ಲಕ್ಷ ತೋರಿರುವ ಎಚ್.ಬಂಡಿವಡ್ಡರ್ ದಿವ್ಯ.

ಇದನ್ನು ಓದಿ : ಎರಡು ಕೋಮಿನ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ ; ಮೂವರಿಗೆ ಗಂಭೀರ ಗಾಯ

ಸರ್ಕಾರಿ ಹೈಸ್ಕೂಲ್​ನಲ್ಲಿ 250ಕ್ಕೂ ಹೆಚ್ಚು ದಾಖಲಿರುವ ವಿದ್ಯಾರ್ಥಿಗಳು. ಶಾಲೆಯಲ್ಲಿ ಹೆಡ್ ಮಾಸ್ಟರ್ ಆಡಿದ್ದೆ ಆಟ ಆಗಿದೆ. ಇದರಿಂದ ಬೇಸತ್ತಾ ಮಕ್ಕಳು ನಿನ್ನೆ ಊಟದಲ್ಲಿ ಹುಳ ಕಂಡ ಕೂಡಲೇ ಎಲ್ಲಾ ಮಕ್ಕಳು ಮನೆಗೆ ವಾಪಸ್ ತೆರಳಿದ್ದಾರೆ. ಬಳಿಕ ಪಾಲಕರ ಗಮನಕ್ಕೆ ತಂದ ವಿದ್ಯಾರ್ಥಿಗಳು.

ಈ ಹಿನ್ನೆಲೆ ಹೈಸ್ಕೂಲ್ ಹೆಡ್ ಮಾಸ್ಟರ್ ವಿರುದ್ಧ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES