ಬೆಂಗಳೂರು : ಕಳೆದ ಮೂರ್ನಾಲ್ಕು ತಿಂಗಳಿನಿಂದ ಕಾದು ಕುಳಿತಿದ್ದ ಎಪಿಎಲ್(APL) ಮತ್ತು ಬಿಪಿಎಲ್(BPL) ಕಾರ್ಡ್ ಬಳಕೆದಾರರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದೆ.
ಇಂದಿನಿಂದ ಎಪಿಎಲ್(APL) ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರದಿಂದ ವೆಬ್ಸೈಟ್ ತೆರೆಯಲಾಗಿದೆ ಎಂದು ಆಹಾರ ವ್ಯವಸ್ಥಾಪಕ ನಿರ್ದೇಶಕರಾದ ಗ್ಯಾನೇಂದ್ರ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಿಪಿಎಲ್(BPL) ಕಾರ್ಡ್ ತಿದ್ದುಪಡಿಗೆ ಮತ್ತು ಸೇರ್ಪಡೆಗೆ ಬೇಡಿಕೆ ಹೆಚ್ಚಾಗಿತ್ತು. ಈ ಹಿನ್ನೆಲೆ ಇಂದಿನಿಂದಲೇ ಹೊಸ ಹೆಸರುಗಳ ಸೇರ್ಪಡೆಗೆ ಮತ್ತು ಪಡಿತರ ತಿದ್ದುಪಡಿಗೆ ವೆಬ್ಸೈಟ್ತೆರೆಯಲಾಗಿದೆ ಎಂದು ಹೇಳಿದ್ದಾರೆ.
ಪಡಿತರಕ್ಕೆ ಹೊಸದಾಗಿ ಹೆಸರನ್ನ ಸೇರಿಸಲು, ತೆಗೆದು ಹಾಕಲು ಅಥವಾ ತಿದ್ದುಪಡಿ ಮಾಡಲು ಇಂದಿನಿಂದ ಸರ್ಕಾರ ಅನುಮತಿ ಕೊಟ್ಟಿದೆ. ರೇಷನ್ ಕಾರ್ಡ್ನಲ್ಲಿ ಹೆಸರುಗಳ ತಿದ್ದುಪಡಿ ಸೇರಿದಂತೆ ವಿಳಾಸದ ಅಡ್ರೆಸ್ ಕೂಡ ತಿದ್ದುಪಡಿ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಮಾನದಂಡ ಏನು?
- ವಾರ್ಷಿಕ ಆದಾಯ 1.2 ಲಕ್ಷ ಮೀರಿರಬಾರದು
- 3 ಹೆಕ್ಟರ್ಗಿಂತ ಹೆಚ್ಚಿನ ಒಣಭೂಮಿ ಹೊಂದಿರಬಾರದು
- ವೈಟ್ ಬೋರ್ಡ್ 4 ಚಕ್ರದ ವಾಹನ ಇರಬಾರದು
- ಯಾವುದೇ ಸರ್ಕಾರಿ ನೌಕರರಾಗಿರಬಾರದು
- ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 sqt ಮೀರಬಾರದು
- ವಾಣಿಜ್ಯ ತೆರಿಗೆ, ಆದಾಯ ತೆರಿಗೆ, IT ರಿಟರ್ನ್ಸ್ ಪಾವತಿದಾರರು