ನವದೆಹಲಿ : 2024ರಲ್ಲಿ ದೇಶದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಬಹಿರಂಗಪಡಿಸಿದೆ.
ಎನ್ಡಿಎ 296ರಿಂದ 326 ಸೀಟು, I.N.D.I.A. ಒಕ್ಕೂಟ 160ರಿಂದ 190, ಬಿಜೆಡಿ 12ರಿಂದ 14 ಹಾಗೂ ಇತರರು 11ರಿಂದ 14 ಸೀಟುಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಕರ್ನಾಟಕದಲ್ಲಿ ಎನ್ಡಿಎ 18ರಿಂದ 20, I.N.D.I.A. ಒಕ್ಕೂಟ 8ರಿಂದ 10 ಹಾಗೂ ಜೆಡಿಎಸ್ 1 ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಇನ್ನೂ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್ಡಿಎ 25 ಸ್ಥಾನ, ಕಾಂಗ್ರೆಸ್ ಕೇವಲ 1 ಸ್ಥಾನ ಪಡೆದುಕೊಂಡಿತ್ತು.
ಒಟ್ಟು ಬಲಾಬಲ : 543
ಪ್ರಸ್ತುತ ಬಲ : 540
ಎನ್ಡಿಎ (NDA) : 340
ಇಂಡಿಯಾ (I.N.D.I.A) : 140
ಇತರೆ : 60
ಬಹುಮತ : 271