ಬೆಂಗಳೂರು : ರಾಜಕಾರಣದಲ್ಲಿ ಕೆಲಸ ಇಲ್ಲದೇ ಇದ್ದಾಗ ಮಾತನಾಡ್ತಾರೆ. ಮಾಧ್ಯಮದವರ ಗಮನ ಸೆಳೆಯಲು ಆರೋಪ ಮಾಡ್ತಾರೆ. ನಾವು ಬದುಕಿದ್ದೀವಿ ಅಂತಾ ತೋರಿಸಿಕೊಳ್ಳಬೇಕಲ್ಲಾ? ಅದಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಸಂಸದ ಡಿ.ಕೆ ಸುರೇಶ್ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ದೂರು ಕೊಟ್ಟು ತನಿಖೆಗೆ ಹೇಳಿದ್ದಾರೆ. ಸರ್ಕಾರದ ಗಮನ ಡೈವರ್ಷನ್ ಮಾಡಲು ಮಾಡ್ತಿದ್ದಾರೆ. ಅಕ್ಕಿ ವಿಚಾರದಲ್ಲಿ ಬಾಯಿಬಾಯಿ ಬಡ್ಕೊಂಡ್ರು. ಬಸ್, ಕರೆಂಟ್ ಎಲ್ಲಾ ಕೊಟ್ವಿ, ಪಾಪ ಇನ್ನೇನು ಮಾಡ್ಬೇಕು ಅವ್ರು. ಆರೋಪ ಮಾಡಿ ಓಡೋಗೋರನ್ನು ಬಹಳ ಮಂದಿಯನ್ನು ನೋಡಿದ್ದೀನಿ ಎಂದು ಕಾಲೆಳೆದಿದ್ದಾರೆ.
ಕೆಲಸ ಮಾಡಿದವರಿಗೆ ಹಣ ಸಿಗುತ್ತದೆ. ಎರಡೂವರೆ ವರ್ಷದಿಂದ ಬಿಲ್ ಬಾಕಿ ಇದೆ. 40% ಕಮಿಷನ್, ಕಳಪೆ ಕಾಮಗಾರಿ ಆರೋಪ ಇದೆ. ತನಿಖೆ ಮಾಡಿ ಹಣ ಬಿಡುಗಡೆ ಮಾಡ್ತೀವಿ ಅಂತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ಬಂದ ಕೂಡಲೇ ಬರಗಾಲ ವಕ್ಕರಿಸಿದೆ
ಪ್ರಚಾರಕ್ಕಾಗಿ ಆರೋಪ ಮಾಡೋದಲ್ಲ
ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ರೆ ಪ್ರಚಾರದಲ್ಲಿ ಇರ್ತೀವಿ ಅಂದುಕೊಂಡ್ರೆ ನಾವೇನು ಮಾಡೋಕೆ ಆಗಲ್ಲ. ಕೇವಲ ಪ್ರಚಾರಕ್ಕಾಗಿ ಆರೋಪ ಮಾಡೋದಲ್ಲ. ಈಗಾಗಲೇ ನಾಲ್ಕು ತಂಡ ರಚನೆ ಮಾಡಲಾಗಿದೆ. ಸಣ್ಣ ಕಂಟ್ರಾಕ್ಟರ್ ಗಳಿಗೆ ತೊಂದರೆ ಆಗೋದು ಬೇಡ ಅಂತ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿಗೆ ಚಾಟಿ ಬೀಸಿದ್ದಾರೆ.