ಬೆಂಗಳೂರು : ನಾನು ಎಲ್ಲೂ ಕದ್ದು ಓಡಿ ಹೋಗಲ್ಲ.. ವಿದೇಶದಲ್ಲೂ ಕೂರಲ್ಲ.. ನಾವೂ ಹಳ್ಳಿ ಮಕ್ಕಳ್ಳೇ.. ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಿದೇಶ ಹೇಗಿದೆ ಅಂತ ನೋಡೋಣ ಅಂತ ಹೋಗಿದ್ದೆ. ದೇಶ ಸುತ್ತು, ಕೋಶ ಓದು ಅಂತಿದೆ. ನಾನು ಎಡನ್ನೂ ಮಾಡ್ತಿದ್ದೇನೆ ಎಂದು ತಿಳಿಸಿದ್ದಾರೆ.
ಗುತ್ತಿಗೆದಾರರು ಕೆಲಸ ಮಾಡಿದ್ದಾರೆ. ಮಾಡಿರುವ ಕೆಲಸಕ್ಕೆ ದುಡ್ಡು ಕೊಡಪ್ಪ. ಹಣವನ್ನು ಯಾಕೆ ಇಟ್ಟುಕೊಂಡು ಕೂತಿದ್ದೀಯಾ? ನಾನು ಭಾಷಣ ಮಾಡುವಾಗ ಹೇಳಿದೆ. 1947-72ರ ಎಮರ್ಜೆನ್ಸಿ ವರೆಗಿನ ಆರ್ಥಿಕ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿದೆ. ಆಗ ಒಂದು ರೂಪಾಯಿ ಹೊಂದಿಸೋದು ಕಷ್ಟ ಇತ್ತು. ಈಗ ದುಡ್ಡಿಗೆ ಬರ ಇಲ್ಲ. ಅದನ್ನ ಹಂಚೋದು ಅಲ್ಲ ಎಂದು ಕುಟುಕಿದ್ದಾರೆ.
ಸ್ವಾಭಿಮಾನದಿಂದ ಬದುಕೋದಕ್ಕೆ ಅವಕಾಶ ಕಲ್ಪಿಸಬೇಕು. ಐದು ಗ್ಯಾರಂಟಿ, ಐದು ಗ್ಯಾರಂಟಿ ಅಂತ ಹೇಳ್ತಾರೆ. ನಿಮ್ಮ ಕಾಂಗ್ರೆಸ್ ಕಚೇರಿ ಇಂದ ಐದು ಗ್ಯಾರಂಟಿ ಕೊಟ್ರಾ? ಜನ ನಿಮಗೆ ವೋಟು ಹಾಕಿದ್ದಾರೆ. ಎಲ್ಲವನ್ನೂ ನೋಡ್ತಿದ್ದೇನೆ ಎಂದು ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.