ಮಂಡ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನ ವಿರೋಧಿ, ಎಟಿಎಂ ಸರ್ಕಾರದ ಮುಖ್ಯಸ್ಥರು. ಕಾಂಗ್ರೆಸ್ ಸರ್ಕಾರ ಭ್ರಷ್ಟ ಹಾಗೂ ಎಟಿಎಂ ಸರ್ಕಾರವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಲೇವಡಿ ಮಾಡಿದ್ದಾರೆ.
ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಬಂದು ಮೂರು ತಿಂಗಳು ಆಗಿಲ್ಲ. ಸರ್ಕಾರದ ಪ್ರಾರಂಭ ದಿನದಿಂದಲೂ ಭ್ರಷ್ಟಚಾರದಲ್ಲಿ ಮುಳುಗಿದೆ. ನಮ್ಮ ಗಿರಾಕಿಗಳು ಎಲ್ಲಿದ್ದೀರಾ ಅಂತ ಹುಡುಕ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಕನ್ನಡಿಗರ ದುಡ್ಡು ಬೇಕು ಎಂಬ ಗುರಿ ಹೊಂದಿದ್ದಾರೆ ಎಂದು ಎಂದು ಕುಟುಕಿದ್ದಾರೆ.
ಪ್ರತಿನಿತ್ಯ, ಪ್ರತಿಕ್ಷಣ ಭ್ರಷ್ಟಚಾರದಲ್ಲೇ ತೊಡಗಿದ್ದಾರೆ. ಈ ಭ್ರಷ್ಟಚಾರ ಕೇವಲ ಚಲುವರಾಯಸ್ವಾಮಿಗೆ ಸೀಮಿತವಾಗಿಲ್ಲ. ಸಿಎಂಯಿಂದ ಹಿಡಿದು ಅವರ ಕುಟುಂಬದ ವರೆಗೂ ಮುಂದುವರಿದಿದೆ. ಕಾಂಗ್ರೆಸ್ ಶಾಸಕರೇ ತಮ್ಮ ಸರ್ಕಾರದ ಭ್ರಷ್ಟಚಾರದ ಬಗ್ಗೆ ಆಪಾದನೆ ಮಾಡಿದ್ದಾರೆ. ಕಾಂಗ್ರೆಸ್ ನವರು ಯಾವತ್ತು ಅವರ ಬುದ್ದಿ ಬಿಡಲ್ಲ. ತಾವೂ ಭ್ರಷ್ಟಚಾರ ಮಾಡುವವರೇ ಎಂದು ಕಿಡಿಕಾರಿದ್ದಾರೆ.
360 ಡಿಗ್ರಿಯಲ್ಲೂ ಭ್ರಷ್ಟಾಚಾರ
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಪದೇ ಪದೆ ಎಡುವಿ ಎಡುವಿ ಬೀಳ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಬಸ್ ನಿರ್ವಾಹಕನ ವರ್ಗಾವಣೆ ಮಾಡಿಸಿದ್ರು. ಅವರ ಕಾಟ ತಡೆಯಲಾರದೆ ವಿಷ ಕುಡಿದ. ಬಳಿಕ ಅಧಿಕಾರಿಗಳನ್ನ ಎತ್ತಂಗಡಿ ಮಾಡ್ತೇನೆ ಎಂಬ ಬೆದರಿಕೆ ಹಾಕಿ ಹಣ ವಸೂಲಿ ಮಾಡೋಕೆ ಕೃಷಿ ಅಧಿಕಾರಿಗಳನ್ನೇ ಬಳಸಿಕೊಂಡ್ರು. ಚಲುವರಾಯಸ್ವಾಮಿ 360 ಡಿಗ್ರಿಯಲ್ಲಿಯು ಭ್ರಷ್ಟಚಾರದಲ್ಲಿ ತೊಡಗಿದ್ದಾರೆ ಎಂದು ಛೇಡಿಸಿದ್ದಾರೆ.
PAY CM, PAY YST ಅಭಿಯಾನ
ಜನ, ರೈತ, ಯುವಕರ ವಿರೋಧಿಗಳೆಂದು ಅಧಿಕಾರಕ್ಕೆ ಬಂದ 2 ತಿಂಗಳಲ್ಲಿ ತೋರಿಸಿದ್ದಾರೆ. ಅಧಿಕಾರದ ಅಮಲು ಕಾಂಗ್ರೆಸ್ ನಾಯಕರ ತಲೆ ಹತ್ತಿದೆ. ಇದೇ ತಿಂಗಳು 17ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡ್ತೇವೆ. ಸಹಾಯಕ ಕೃಷಿ ನಿರ್ದೇಶಕರಿಗೆ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ತಿಳಿಸ್ತೇವೆ. ಲೋಕಾಯುಕ್ತ ತನಿಖೆಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡ್ತೇವೆ. ಗುತ್ತಿಗೆದಾರರಿಂದ ಕಮಿಷನ್ ಕೇಳಿದ ಡಿ.ಕೆ. ಶಿವಕುಮಾರ್ ಹಾಗೂ ಚಲುವರಾಯಸ್ವಾಮಿ ವಜಾಕ್ಕೆ ಆಗ್ರಹಿಸುತ್ತೇವೆ. ಇಡೀ ರಾಜ್ಯಾದ್ಯಂತ ಪೇ ಸಿಎಂ, ಪೇ ವೈಎಎಸ್ಟಿ ಅಭಿಯಾನ ಆರಂಭಿಸುತ್ತೇವೆ ಎಂದು ಚಾಟಿ ಬೀಸಿದ್ದಾರೆ.