Friday, September 20, 2024

ಸ್ವಾತಂತ್ರ್ಯ ದಿನಾಚರಣೆ; ಬೆಂಗಳೂರಿನ ಮಾಣಿಕ್ಯ ಷಾ ಮೈದಾನದಲ್ಲಿ ಭರ್ಜರಿ ಸಿದ್ಧತೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಧ್ವಜರೋಹಣ ಮಾಡಲಿದ್ದು, ರಾಜ್ಯದಲ್ಲಿ ರಾಜಧಾನಿ ಬೆಂಗಳೂರಿನ ಮಾರ್ಷಲ್ ಮಾಣಿಕ್ಯ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆಗಳು ನಡೆದಿವೆ.

ಇದೇ ಆಗಸ್ಟ್ 15 ರಂದು ಇಡೀ ದೇಶವು 77ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಸಾಕ್ವಿಯಾಗಲಿದೆ. ಮಾಣಿಕ್ಯ ಷಾ ಪರೇಡ್ ಗ್ರೌಡ್​ನಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಸಿದ್ಧತೆ ಜೋರಾಗುತ್ತಿದೆ. ನಾಳೆ ಬೆಳಗ್ಗೆ 9 ಗಂಟೆಗೆ ಸಿಎಂ ಸಿದ್ಧರಾಮಯ್ಯ ಅವರು ಧ್ವಜರೋಹಣ ನೆರವೇರಿಸಲಿದ್ದು, ಸ್ವಾತಂತ್ರ್ಯೋತ್ಸವದ ಪ್ರಮುಖ ಆಕರ್ಷಣೆಯಾದ ಪರೇಡ್‌ಗೆ 3 ಹಂತಗಳಲ್ಲಿ ರಿಹರ್ಸಲ್‌ ನಡೆಯುತ್ತಿದೆ. ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ, ನಗರದ ಪೋಲಿಸ್ ಕಮಿಷನರ್ ಬಿ. ದಯಅನಂದ್ ಹಾಗೂ ನಗರದ  ಜಿಲ್ಲಾಧಿಕಾರಿ ದಯಾನಂದ್ ಪರೇಡ್ ಗ್ರೌಡ್​ನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.

ಇದನ್ನು ಓದಿ : WI vs IND : ವಿಂಡೀಸ್​ಗೆ 166 ಟಾರ್ಗೆಟ್ ಕೊಟ್ಟ ಇಂಡಿಯಾ

ಭಧ್ರತೆ ಹೇಗಿರಲಿದೆ? 

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಭದ್ರತೆ ದೃಷ್ಟಿಯಿಂದ ಮೈದಾನದ ಸುತ್ತಾ 100 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹಾಗೂ 12 ಬ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಭಾರಿ ಗೋವಾ ಪೊಲೀಸರ ವಿಶೇಷ ತಂಡ ಕೂಡ ಸ್ವಾತಂತ್ಯ ದಿನಾಚರಣೆಯಲ್ಲಿ ಭಾಗಿಯಾಗಲಿದೆ. ಅಷ್ಟೇ ಅಲ್ಲದೆ ಕಾರ್ಯಕ್ರಮಕ್ಕೆ ಬರುವವರಿಗೆ ಮೊಬೈಲ್ ಬಳಕೆ ಕೂಡ ನಿಷೇಧ ಮಾಡಲಾಗಿದೆ.

ಏನೇನು ಸಿದ್ಧತೆಗಳು ಮಾಡಲಾಗಿದೆ

ಮಾಣಿಕ್ಯ ಷಾ ಪರೇಡ್ ಮೈದಾನದಲ್ಲಿ ಒಟ್ಟು 38 ತುಕಡಿಗಳಿಂದ 1,350 ಮಂದಿ ಭಾಗವಹಿಸಲಿದ್ಧಾರೆ. ಧ್ವಜ ರೋಹಣ ಬಳಿಕ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ನೆಡೆಸಲಾಗುತ್ತಿದೆ.ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ವೀಕ್ಷಿಸಲು ಬರುತ್ತಿರುವ ಅತಿಗಣ್ಯ, ಗಣ್ಯ, ಇತರೆ ಆಹ್ವಾನಿತರಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕವಾಗಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಂದಿನಿಂದ 3 ದಿನಗಳ ಕಾಲ ಹರ್‌ಘರ್‌ ತಿರಂಗ್‌ ಅಭಿಯಾನದಡಿ ಧ್ವಜಗಳನ್ನು ಹಾರಿಸಲು ಅವಕಾಶ ನೀಡಿದೆ. ಸುಮಾರು 2 ಲಕ್ಷ ರಾಷ್ಟ್ರ ಧ್ವಜಗಳನ್ನ ಹಂಚಲಾಗ್ತಿದೆ.

  • ಜಿ-2 ದ್ವಾರದ ಮೂಲಕ ವಿಐಪಿ, ವಿವಿಐಪಿಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಪ್ರವೇಶವನ್ನು ನೀಡಲಾಗಿದೆ.
  • ಜಿ-3 ದ್ವಾರದ ಮೂಲಕ ಇತರೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು ಹಾಗೂ ಬಿಎಸ್ಎಫ್ ಅಧಿಕಾರಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ.
  • ಜಿ-4 ದ್ವಾರದ ಮೂಲಕ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಕೂಡ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಆಗಮಿಸಲಿದ್ದು ಕೆಲ ರಸ್ತೆಗಳಲ್ಲಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ಒಟ್ಟಾರೆ 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ರಾಜಧಾನಿ ರಂಗೇರಿದ್ದು, ನಾಳೆ (ಮಂಗಳವಾರ) ಬಾನಂಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿ ನಿಂತಿದೆ.

RELATED ARTICLES

Related Articles

TRENDING ARTICLES