ಬೆಂಗಳೂರು: 76 ನೇ ಸ್ವತಂತ್ರ್ಯ ಮಹೋತ್ಸವಕ್ಕೆ ದಿನಗಣನೆ ಆರಂಭದವಾದ ಬೆನ್ನಲ್ಲೇ ರಾಜಧಾನಿ ಬೆಂಗಳೂರಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 76 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು ನಗರದ ತುಂಬಾ ತ್ರಿವರ್ಣ ಧ್ವಜ ರಾರಾಜಿಸಲಿದ್ದು ಇದಕ್ಕಾಗಿ 15 ಲಕ್ಷ ತಿರಂಗ ಅವಷ್ಯಕ ಇದೆ, ಈ ಪೈಕಿ 10 ಲಕ್ಷ ಧ್ವಜವನ್ನು ತರಿಸಲಾಗಿದೆ.
ಇದನ್ನೂ ಓದಿ : ಒಂದು ರೂಪಾಯಿಗೆ ಒಂದು ಇಡ್ಲಿ; ಸಿಕ್ಕಾಪಟ್ಟೆ ಡಿಮ್ಯಾಂಡ್ ಎಲ್ಲಿ ಗೊತ್ತಾ?
ನಗರಾದ್ಯಂತ ಇರುವ ಮನೆಗಳು, ದೇವಸ್ಥಾನ, ಮದರಸಾ, ಮಸೀದಿಗಳಲ್ಲಿಯು ಈ ಬಾರಿಯು ರಾಷ್ಟ್ರ ಧ್ವಜ ಹಾರಾಡಲಿದೆ, ಜೊತೆಗೆ ಎಲ್ಲಾ ಶಾಲೆ, ಕಾಲೇಜು ಮೇಲೂ ರಾಷ್ಟ್ರಧ್ವಜ ಹಾರಿಸಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ.
ಬಿಬಿಎಂಪಿ ಪಾಲಿಕೆ ವತಿಯಿಂದ ಧ್ವಜ ಮಾರಾಟ ಮಾಡಲು ಸಿದ್ದತೆ ಮಾಡಿಕೊಂಡಿದ್ದು ದೊಡ್ಡ ಧ್ವಜಕ್ಕೆ 25 ರೂಪಾಯಿ, ಚಿಕ್ಕ ಧ್ವಜಕ್ಕೆ 10 ರೂಪಾಯಿ ದರ ನಿಗಧಿ ಮಾಡಲಾಗಿದೆ. ಈ ಬಾರಿ ಪಾಲಿಸ್ಟರ್ ಧ್ವಜಗಳ ಬಳಕೆಯೂ ಅನಿವಾರ್ಯ ಇದಕ್ಕಾಗಿ ಆಡಳಿತ ವಿಭಾಗದ ವಿಶೇಷ ಆಯುಕ್ತರನ್ನು ನೂಡಲ್ ಆಫಿಸರ್ ಆಗಿ ನೇಮಕ ಮಾಡಲಾಗಿದೆ.
ಇನ್ನು ವಾರ್ಡ್ ಇಂಜಿನಿಯರ್ಸ್, ಎಆರ್ಒ ಗಳು ಬೆಂಗಳೂರಿನ ಗಲ್ಲಿ ಗಲ್ಲಿಗೂ ಹೋಗಿ ಧ್ವಜಾರೋಹಣದ ಬಗ್ಗೆ ಅರಿವು ಮೂಡಿಸಲು ಸಜ್ಜಾಗಿದ್ದಾರೆ ಎಂದು ಅವರು ಹೇಳಿದರು.