ಚಿಕ್ಕಮಂಗಳೂರು : ಸರ್ಕಾರಿ ಬಸ್ಗಳು ಇಲ್ಲದೆ ಕಾಫಿನಾಡಲ್ಲಿ ಪರದಾಡಿದ ಪ್ರವಾಸಿಗರು ಘಟನೆ ಜಿಲ್ಲೆಯ ಕಳಸ ತಾಲೂಕಿನ ಹೊರನಾಡಿನಲ್ಲಿ ನಡೆದಿದೆ.
ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಇಳಿಮುಖವಾಗಿರುವ ಸರ್ಕಾರಿ ಬಸ್ಗಳ ಸಂಖ್ಯೆ. ಇದರ ಬೆನ್ನಲ್ಲೇ ಹೊರನಾಡಿನ ಅನ್ನಪೂರ್ಣೇಶ್ವರಿ ತಾಯಿಯ ದರ್ಶನ ಪಡೆಯಲು ಬಂದಿದ್ದ, ದಾವಣಗೆರೆ, ಚಿತ್ರದುರ್ಗ, ಹಾಸನ, ತುಮಕೂರು ಮತ್ತು ಕಡೂರು ಪ್ರಯಾಣಿಕರು ನಿನ್ನೆ ಸಂಜೆಯಿಂದ ಬಸ್ಗಾಗಿ ಕಾಯುತ್ತಿದ್ದ ಭಕ್ತರು.
ಇದನ್ನು ಓದಿ : ಟೆಂಪೋ ಟಯರ್ ಅಡಿ ಸಿಲುಕಿ ಬಾಲಕ ಸಾವು
ಬಳಿಕ ರಾತ್ರಿಯಾದರು ಬಸ್ ಸಿಗದೆ ಕಾದು ಕಾದು ಬೇಸತ್ತಾ ಪ್ರವಾಸಿಗರು. ಬಸ್ ಬಾರದ ಹಿನ್ನೆಲೆ ದುಬಾರಿ ಹಣವನ್ನು ನೀಡಿ ಪಿಕಪ್ ವಾಹನವೊಂದರಲ್ಲಿ ಮೂಡಿಗೆರೆಗೆ ಪ್ರಯಾಣಿಸಿದ ಭಕ್ತರು. ಅದರಲ್ಲಿಯೂ ಸಹ 80 ಕ್ಕೂ ಹೆಚ್ಚು ವಾಹನದಲ್ಲಿ ಕುಳಿತಿದ್ದ ಮಹಿಳೆಯರು. ವಿಧಿಯಿಲ್ಲದೆ ಪುರುಷರು ಅದೇ ವಾಹನದಲ್ಲಿ ನಿಂತುಕೊಂಡು ಪ್ರಯಾಣಿಸಿದ್ದಾರೆ.
ಈ ಹಿನ್ನೆಲೆ ಹೊರ ಜಿಲ್ಲೆಗಳಿಂದ ಬಂದ ಪ್ರವಾಸಿಗರಿಗೆ ಬಸ್ ಸಿಗದ ಕಾರಣ ಹೊರನಾಡಿಗೆ ಬಂದಿದ್ದ ಭಕ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.