ಮೈಸೂರು : ವೇಗವಾಗಿ ಸೈಕಲ್ನಲ್ಲಿ ಬಂದ ಮಕ್ಕಳು ಟೆಂಪೋ ಟಯರ್ ಅಡಿಗೆ ಸಿಲುಕಿ ಒರ್ವ ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಅಭಿಷೇಕ್ ವೃತ್ತದಲ್ಲಿ ನಡೆದಿದೆ.
ಬಾಲಾಜಿ ಅಲಿಯಾಸ ತಿರುಪತಿ ಮೃತಪಟ್ಟ ಬಾಲಕ. 10 ನೇ ತರಗತಿ ಓದುತ್ತಿದ್ದು, ತನ್ನ ಸ್ನೇಹಿತನ ಜೊತೆ ಸೈಕಲ್ನಲ್ಲಿ ಮನೆಗೆ ತೆರಳುತ್ತಿದ್ದ ಇಬ್ಬರು ಮಕ್ಕಳು. ಈ ವೇಳೆ ಸರ್ಕಲ್ ಒಂದರಲ್ಲಿ ಮಕ್ಕಳು ಅತೀ ರಭಸದಿಂದ ಬಂದ ಪರಿಣಾಮ ಟೆಂಪೋ ವಾಹನ ಒಂದು ಬಂದಿದ್ದು, ಸೈಕಲ್ ವೇಗವನ್ನು ನಿಯಂತ್ರಿಸಲಾಗದೆ ಟೆಂಪೋ ಹಿಂಬದಿ ಟಯರ್ ಗೆ ಸಿಕ್ಕಿ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಇದನ್ನು ಓದಿ : ಸಿಸಿಬಿ ಪೊಲೀಸರಿಂದ ಪುನೀತ್ ಕೆರೆಹಳ್ಳಿ ಬಂಧನ!
ಸದ್ಯ ಅದೃಷ್ಟವಶಾತ್ ಮತ್ತೊಬ್ಬ ಬಾಲಕ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಘಾತದಿಂದ ಪರಾಗಿದ್ದಾನೆ. ಮೂಲತಃ ಯಳಂದೂರ ಗ್ರಾಮದ ರಾಮಣ್ಣ ಎಂಬುವವನ ಪುತ್ರನಾಗಿದ್ದು, ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ಹಿನ್ನೆಲೆ ವಿವಿ ಪುರಂ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.