ಬೆಂಗಳೂರು: ಸ್ಯಾಂಡಲ್ವುಡ್ ನಟ ಚಿನ್ನಾರಿ ಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ ಅವರ ಪತ್ನಿ ಇಂದು ಹೃದಯಾಘಾತದಿಂದ ಬ್ಯಾಂಕಾಕ್ನಲ್ಲಿ ಕೊನೆಯುಸಿರೆಳಿದ್ದಾರೆ.
ಇದನ್ನು ಓದಿ: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ!
ಇತ್ತೀಚೆಗೆ ತಮ್ಮ ಸಂಬಂಧಿಕರೊಂದಿಗೆ ಯೂರೋಪ್ ಪ್ರವಾಸ ಕೈಗೊಂಡಿದ್ದ ವಿಜಯ್ ಪತ್ನಿ ಸ್ಪಂದನಾ ಲೋ ಬಿಪಿ ಯಿಂದಾಗಿ ತೀವ್ರ ಹೃದಯಾಘಾತದಿಂದ ಬ್ಯಾಂಕಾಕ್ನಲ್ಲಿ ನಿಧರಾಗಿದ್ದಾರೆ.
2007ರ ಆಗಸ್ಟ್ 26 ರಂದು ಸ್ಪಂದನಾ ರನ್ನು ವಿಜಯ್ ರಾಘವೇಂದ್ರ ಮದುವೆಯಾಗಿದ್ದರು, ವಿಜಯ ರಾಘವೇಂದ್ರ ಹಾಗೂ ಸ್ಪಂದನಾರದ್ದು ಪ್ರೇಮವಿವಾಹವಾಗಿತ್ತು. ಇವರ ದಾಂಪತ್ಯಕ್ಕೆ ಶೌರ್ಯ ಎಂಬ ಮಗನಿದ್ದಾನೆ.
ಇತ್ತೀಚೆಗೆ ತಮ್ಮ ದೇಹದ ತೂಕ ಇಳಿಸಿಕೊಳ್ಳುವ ಸಲುವಾಗಿ ಡಯಟ್ ಮತ್ತು ಜಿಮ್ ಮೊರೆ ಹೋಗಿದ್ದರು, ನಿತ್ಯ ಡಯೆಟ್ ತಪ್ಪದೇ ಪಾಲಿಸುತ್ತಿದ್ದರು, ದೇಹದಂಡನೆಗೆ ಇಳಿದದ್ದೇ ಈ ಆಘಾತಕ್ಕೆ ಕಾರಣವಾಯಿತೆ ಎನ್ನುವ ಪ್ರಶ್ನೆ ಈಗ ಕಾಡಿದೆ.
16ನೇ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನು ಕೇವಲ 19 ದಿನಗಳಷ್ಟೆ ಬಾಕಿ ಇದ್ದ ಸಂದರ್ಭದಲ್ಲಿ ಸ್ಪಂದನಾ ಸಾವು ವಿಜಯ್ ರಾಘವೇಂದ್ರ ಬದುಕಿನಲ್ಲಿ ತುಂಬಲಾಗದ ನಷ್ಟವನ್ನುಂಟು ಮಾಡಿದೆ.