Sunday, November 24, 2024

ಸರ್ಕಾರಿ ಶಾಲೆಗೆ ಕನ್ನ ಹಾಕಿದ ಖದೀಮರು

ಬೀದರ್ : ಜಿಲ್ಲೆಯ ಸರ್ಕಾರಿ ಶಾಲೆ ಗೊಡೌನ್​ ಗೆ​ ನುಗ್ಗಿದ ಕಳ್ಳರು ಮೂಟೆಗಳನ್ನು ಹೊತ್ತೊಯ್ದಿರುವ ಘಟನೆ  ಹುಲಸೂರ ತಾಲೂಕಿನ ಬೇಲೂರಿನಲ್ಲಿ ನಡೆದಿದೆ.

ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಇಲ್ಲಿನ ಸರ್ಕಾರಿ ಶಾಲೆಗೆ ನುಗ್ಗಿದ ಕಳ್ಳರು ಗೊಡೌನ್​ನಲ್ಲಿದ್ದ ಎರಡು ಚೀಲ ಕದ್ದು ಪರಾರಿಯಾಗಿದ್ದು, ಕಳ್ಳರ ಕೈಚಳಕದ ದೃಶ್ಯಗಳು ಶಾಲೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ : ಹೊಸಕೋಟೆ ಬಳಿ ಡೆಡ್ಲಿ ಆ್ಯಕ್ಸಿಡೆಂಡ್ !

ಇತ್ತೀಚೆಗೆ ಬೀದರ್​ ಜಿಲ್ಲಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿದ ಹಿನ್ನೆಲೆ ಜಿಲ್ಲಾ ಪೊಲೀಸ್ ಎಸ್​ಪಿ ಅಪರಾಧ  ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಭೇಟಿ ನೀಡಿದ್ದರು, ಎಸ್​ಪಿ ಭೇಟಿ ನೀಡಿದ ಮರುದಿನವೇ ಕಳ್ಳರು ಸರ್ಕಾರಿ ಶಾಲೆಗೆ ನುಗ್ಗಿ ತಮ್ಮ ಕೈಚಳಕವನ್ನು ತೋರಿದ್ದಾರೆ.

ಕಾರ್​ನಲ್ಲಿ ಬಂದ ಕೃತ್ಯ ಎಸಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES