Monday, November 25, 2024

ನಾಳೆ ಸಂಕಷ್ಟ ಹರ ಚತುರ್ಥಿ : ಪೂಜಾ ವಿಧಾನ, ಸಮಯದ ಬಗ್ಗೆ ಇಲ್ಲದೆ ಮಾಹಿತಿ

ಬೆಂಗಳೂರು : ನಾಳೆ ಸಂಕಷ್ಟ ಹರ ಚತುರ್ಥಿ. ಇದು ವಿಶೇಷವಾಗಿ ಅಧಿಕ ಮಾಸದಲ್ಲಿ ಬಂದಿರುವುದು ಜಗತ್ತಿಗೆ ಶುಭವನ್ನು ನೀಡುತ್ತಿದೆ.

ಅಧಿಕ ಮಾಸದ ಸಂಕಷ್ಟ ಹರ ಚತುರ್ಥಿಯನ್ನು ವಿಶೇಷವಾಗಿ ಮಕರ, ಕುಂಭ ಮತ್ತು ಮೀನ ರಾಶಿಯವರು ಕ್ರಮಬದ್ಧವಾಗಿ ಆಚರಿಸುವುದರಿಂದ ವಿಶೇಷ ಫಲಗಳನ್ನು ಕಾಣಬಹುದು.

ಸಂಕಷ್ಟ ಹರ ಚತುರ್ಥಿಯಿಂದ ಯಾವ ಫಲ ಉಂಟಾಗುತ್ತೆ? ಯಾವ ರಾಶಿಯವರಿಗೆ ಹೆಚ್ಚಿನ ಫಲ? ಪೂಜಾ ವಿಧಾನ ಹಾಗೂ ಸಮಯದ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್​ ಟಿವಿಗೆ ಮಾಹಿತಿ ನೀಡಿದ್ದಾರೆ.

ಪೂಜೆ ಮಾಡುವವರು ಏನನ್ನು ಮಾಡಬೇಕು?

  • ಅಭ್ಯಂಜನ ಸ್ನಾನವನ್ನು ಮಾಡಬೇಕು
  • ತಂದೆ, ತಾಯಿಯ ಮತ್ತು ಗುರುಗಳ ಅಪ್ಪಣೆಯನ್ನು ಪಡೆದು ಸಂಕಲ್ಪ ಮಾಡಬೇಕು
  • ಗಣೇಶನ ನಾಮ ಸಂಕೀರ್ತನೆಯಲ್ಲಿ ತೊಡಗಿಸಿಕೊಳ್ಳಬೇಕು
  • ಶುದ್ಧ ಮನಸ್ಸಿನಿಂದ ಪರೋಪಕಾರ ಮಾಡಬೇಕು
  • ಮನೆಯಲ್ಲಿ ಮತ್ತು ಮನದಲ್ಲಿ ಶಾಂತಿ ನೆಮ್ಮದಿಯನ್ನು ಸ್ಥಾಪಿಸಿ
  • ಮನಸ್ಸಿನಲ್ಲಿ ಒಳ್ಳೆಯದನ್ನೇ ಯೋಚಿಸಿ
  • ಮನೆಯನ್ನು ಸೈಂದವ ಲವಣದಿಂದ ಶುದ್ಧಿಗೊಳಿಸಿ
  • ಸಾಧ್ಯವಾದಷ್ಟು ಅನ್ನದಾನವನ್ನು ಮಾಡಿ

ಇದನ್ನೂ ಓದಿ : ಸಿದ್ದರಾಮಯ್ಯಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಯಡಿಯೂರಪ್ಪ

ಯಾವ ಸಮಯದಲ್ಲಿ ಪೂಜೆ ಮಾಡಬೇಕು ?

  • ಪ್ರಜಾ ಸಮಯ : ಸಂಜೆ 5 ರಿಂದ ರಾತ್ರಿ 8:02:09 ವರೆಗೆ ಶುಭ
  • ಚಂದ್ರಾರ್ಘ್ಯ : ರಾತ್ರಿ 9.20

ಪೂಜಾ ಸಮಯದಲ್ಲಿ ಗರಿಕೆ ಮತ್ತು ಶ್ರೀಗಂಧ, ಬಿಲ್ವಪತ್ರೆ, ಸಂಪಿಗೆ ಹೂಗಳು, ಕೆಂಪು ವಸ್ತ್ರವನ್ನು ಸಮರ್ಪಿಸಬೇಕು ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES