ಚೀನಾ : 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೆಚ್ಚಾಗಿ ಇಂಟರ್ನೆಟ್ ವ್ಯಸನಿಗಳಾಗುತ್ತಿರುವುದನ್ನು ತಪ್ಪಿಸಲು ಮುಂದಾಗಿರುವ ಚೀನಾ ಸರ್ಕಾರ ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಮುಂದಾಗಿದೆ. ಮಕ್ಕಳು ದಿನಕ್ಕೆ 2 ಗಂಟೆ ಮಾತ್ರ ಮೊಬೈಲ್ ಬಳಸಬಹುದಾಗಿದ್ದು, ರಾತ್ರಿಯ ವೇಳೆ ಇಂಟರ್ನೆಟ್ ಸಂಪರ್ಕವನ್ನು ಸಹ ಕಡಿತಗೊಳಿಸಲಾಗುತ್ತದೆ.
ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ಮೇಲೆ ಶೇ.28ರಷ್ಟು ತೆರಿಗೆ ಜಾರಿಗೆ ಸಿದ್ದತೆ!
ಇಂಟರ್ನೆಟ್ ದುರ್ಬಳಕೆಯ ಕುರಿತಾಗಿ ಕಳವಳ ವ್ಯಕ್ತಪಡಿಸಿರುವ ಚೀನಾದ ಸೈಬರ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ಸಿಎಸಿ) ಈ ಹೊಸ ನಿಯಮಗಳನ್ನುಳ್ಳ ಕರಡು ಮಸೂದೆಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಇಂಟರ್ನೆಟ್ ಕಡಿತ ಸೆ.2ರಿಂದ ಜಾರಿಯಾಗುವ ಸಾಧ್ಯತೆ ಇದ್ದು, ಮೊಬೈಲ್ ಬಳಕೆಗೆ ಸಮಯ ನಿಗದಿ ಮಾಡುವ ಕುರಿತಾಗಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.
ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಮಕ್ಕಳಬಳಸುವ ಮೊಬೈಲ್‌ಗಳಿಗೆ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಜೊತೆಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ದಿನಕ್ಕೆ ಗರಿಷ್ಠ 2 ಗಂಟೆ ಮತ್ತು 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು 40 ನಿಮಿಷ ಮಾತ್ರ ಮೊಬೈಲ್ ಬಳಕೆ ಮಾಡುವಂತೆ ನಿಮಿಷ ನಿಯಂತ್ರಣ ಹೇರುವತ್ತ ಸರ್ಕಾರ ಚಿಂತಿಸಿದೆ.
ಚೀನಾ ಬಹುತೇಕ ಮೊಬೈಲ್‌ಗಳ ತಯಾರಿಕ ಹಬ್ ಆಗಿದ್ದು, ಇಲ್ಲಿ ತಯಾರಾಗುವ ಎಲ್ಲಾ ಮೊಬೈಲ್‌ಗಳಲ್ಲಿ ಮೈನರ್ ಮೋಡ್ ಎಂಬ ಆಯ್ಕೆಯನ್ನು ಒದಗಿಸಲಾಗುತ್ತದೆ. ಇದನ್ನು ಆನ್” ಮಾಡುವ ಕೆಲಸವನ್ನು ಪೋಷಕರು ಮಾಡಬೇಕು. ಈ ಮೋಡ್ ಆನ್ ಆಗಿದ್ದಾಗ 18ವರ್ಷದಕೆಳಗಿನ ಮಕ್ಕಳು ನೋಡಬಹುದಾದ ಮತ್ತು ಆಡಿಯೋಗಳನ್ನಷ್ಟೇ ದೊರೆಯುವಂತೆ ಇಂಟರ್ನೆಟ್ ನೀಡುವ ಕಂಪನಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ ಎಂದು ಹಲವು ವರದಿಗಳು ತಿಳಿಸಿವೆ.
ಕಳೆದ ವರ್ಷ ಆನ್ ಗೇಮಿಂಗ್ ಮೇಲೆ ನಿಷೇಧ ವಿಧಿಸಿದ ಚೀನಾ ಸರ್ಕಾರ ವಾರಕ್ಕೆ ಗರಿಷ್ಠ 3 ಗಂಟೆಗಳಷ್ಟೇ ಮಕ್ಕಳು ಆನ್ನೈನ್ ಗೇಮ್ ಆಡಬಹುದು ಎಂದು ಹೇಳಿತ್ತು.