Monday, November 25, 2024

ಆನ್‌ಲೈನ್‌ ಗೇಮಿಂಗ್ ಮೇಲೆ ಶೇ.28ರಷ್ಟು ತೆರಿಗೆ ಜಾರಿಗೆ ಸಿದ್ದತೆ!

ನವದೆಹಲಿ : ಬುಧವಾರ ನಡೆದ ಮಂಡಳಿ ಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಮತ್ತು ಕ್ಯಾಸಿನೋಗಳಲ್ಲಿ ಮಾಡಲಾಗುವ ಬೆಟ್‌ನ ಮುಖಬೆಲೆಯ ಮೇಲೆ ಶೇ.28ರಷ್ಟು ಜಿಎಸ್ಟಿ ವಿಧಿಸುವ ನೀತಿ ಅ.1ರಿಂದ ಜಾರಿ ಮಾಡಲು ಕೇಂದ್ರ ಜಿಎಸ್ಸಿ ಮಂಡಳಿ ನಿರ್ಧರಿಸಿದೆ.

ಇದನ್ನೂ ಓದಿ: 1 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಅಧಿಕಾರಿಗಳು

ಶೇ.28ರಷ್ಟು ಜಿಎಸ್ಟಿ ವಿಧಿಸುವ ನಿರ್ಧಾರಕ್ಕೆ ಗೋವಾ, ದೆಹಲಿ ಮತ್ತು ಸಿಕ್ಕಿಂ ರಾಜ್ಯಗಳು ವಿರೋಧ ವ್ಯಕ್ತಪಡಿಸಿದವು. ಆದರೆ ಉಳಿದ ಬಹುತೇಕ  ಸದಸ್ಯರು ಬೆಂಬಲಿಸಿದ ಕಾರಣ ಹೊಸ ನೀತಿ ಜಾರಿಗೆ ನಿರ್ಧರಿಸಲಾಯಿತು.

ಈ ಸಂಬಂಧ ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲಾಗುವುದು. ತೆರಿಗೆ ಪ್ರಮಾಣದ ಬಗ್ಗೆ 6 ತಿಂಗಳ ಬಳಿಕ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES