ಕಾರವಾರ : ಮೊಬೈಲ್ ಚಾರ್ಜರ್ ಶಾಕ್ನಿಂದಾಗಿ 8 ತಿಂಗಳ ಮಗು ಧಾರುಣ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ಸಿದ್ದರ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಸ್ಯಾಂಟ್ರೋ ರವಿ ಕಾಟಕ್ಕೆ ಬೇಸತ್ತ ಪೊಲೀಸರು: ಅಧಿಕಾರಿಗಳಿಂದ ನ್ಯಾಯಾಧೀಶರಿಗೆ ಪತ್ರ
ಸಂತೋಷ್ ಸಂಜನಾ ದಂಪತಿಯ 8 ವರ್ಷದ ಮಗು ಸಾನಿಧ್ಯ, ಸಾವಿಗೀಡಾದ ನತದೃಷ್ಟೆ, ಮನೆಯಲ್ಲಿ ಮೊಬೈಲ್ ರೀಚಾರ್ಜ್ ಮಾಡಲು ಇಟ್ಟು ಚಾರ್ಜ್ ಆದ ಬಳಿಕ ಸ್ವಿಚ್ ಆಫ್ ಮಾಡದೇ ಹಾಗೆ ಬಿಡಲಾಗಿತ್ತು, ಈ ವೇಳೆ ಮಗು ಆಟವಾಡುತ್ತ ಚಾರ್ಜರ್ನ್ನು ಬಾಯಿಗೆ ಇಟ್ಟುಕೊಂಡಾಗ ವಿದ್ಯುತ್ ಶಾಕ್ ತಗುಲಿ ಅಸ್ವಸ್ಥಗೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ ಮಗು ಬದುಕುಳಿಯಲಿಲ್ಲ.
ಸದ್ಯ ಈ ಪ್ರಕರಣವು ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.