Sunday, November 10, 2024

ಸಿಎಂಗೂ ಇಂಥ ಕೇಸ್​ಗಳ ವಾಪಸಾತಿಗೆ ಪತ್ರ ಬರೆದಿದ್ದಾರೆ : ಬಸವರಾಜ ಬೊಮ್ಮಾಯಿ

ಬೆಂಗಳೂರು : ಹೊರ ದೇಶಗಳ ಶಕ್ತಿಗಳ ಕುಮ್ಮಕ್ಕಿನಿಂದ ಇಂತಹ ಕೃತ್ಯಗಳು ನಡೀತಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದಾರೆ.

ಶಾಸಕ ತನ್ವೀರ್ ಸೇಠ್ ಗೃಹ ಸಚಿವರಿಗೆ ಪತ್ರ ಬರೆದಿರುವ ವಿಚಾರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಂಥ ಕೇಸ್ ಗಳನ್ನು ವಾಪಸ್ ಪಡೆಯಲು ಹೋಗ್ತಿರೋದು ಸರಿಯಲ್ಲ ಎಂದು ಗುಡುಗಿದ್ದಾರೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್ ಬಹಳ ಗಂಭೀರ ಆಗಿವೆ. ಪೊಲೀಸ್ ಠಾಣೆ ಸುಟ್ಡಿದ್ದಾರೆ, ಶಾಸಕನ ಮನೆ ಸುಟ್ಟಿದ್ದಾರೆ. ಇವರೆಲ್ಲ ರಾಜ್ಯದ ವಿರುದ್ಧ ದಂಗೆ ಎದ್ದವರು. ಇಂಥ ದುಷ್ಟ ಶಕ್ತಿಗಳಿಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ಕೊಡಬಾರದು. ಸರ್ಕಾರ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು. ಸಿಎಂಗೂ ಈ ರೀತಿಯ ಕೇಸ್ ಗಳ ವಾಪಸಾತಿಗೆ ಮನವಿ ಕೊಟ್ಟಿದ್ದಾರೆ ಅಂತ ಕೇಳಿಬಂದಿದೆ. ಸಿಎಂ ಇದರ ಬಗ್ಗೆ ಸ್ಪಷ್ಟನೆ ಕೊಡಬೇಕು. ವಿದ್ರೋಹಿ ಶಕ್ತಿಗಳ ಪರ ಸರ್ಕಾರ ನಿಲ್ಲಬಾರದು ಎಂದು ಆಗ್ರಹಿಸಿದ್ದಾರೆ.

ವಿದ್ಯಾರ್ಥಿನಿಯರ ಸಸ್ಪೆಂಡ್ ಮಾಡಿದ್ದೇಕೆ?

ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ವಿಡಿಯೋ ‌ಮಾಡಿರೋದು ಹೇಯ ಕೃತ್ಯ, ಖಂಡನೀಯ. ಒಬ್ಬ ವಿದ್ಯಾರ್ಥಿನಿ ಇದನ್ನು ಬಯಲಿಗೆಳೆದರೆ ಆಕೆ ವಿರುದ್ಧವೇ ಪೊಲೀಸರು ತನಿಖೆ ಮಾಡ್ತಾರೆ. ಪೊಲೀಸರು ಯಾರ ಒತ್ತಡಕ್ಕೆ ಕೆಲಸ ಮಾಡ್ತಿದ್ದಾರೆ. ಪೊಲೀಸರು ಏನೂ ಆಗಿಲ್ಲ ಅಂತಿದ್ದಾರೆ. ಹಾಗಾದ್ರೆ, ಕಾಲೇಜಿನವರು ಸುಮ್ ಸುಮ್ಮನೆ ಆ ಮೂವರು ವಿದ್ಯಾರ್ಥಿನಿಯರ ಸಸ್ಪೆಂಡ್ ಮಾಡಿದ್ದೇಕೆ? ಯಾಕೆ ಆ ವಿದ್ಯಾರ್ಥಿನಿಯರು ತಪ್ಪೊಪ್ಪಿಗೆ ಬರೆದುಕೊಡಬೇಕು? ಅವರ ತಪ್ಪೊಪ್ಪಿಗೆ ಪತ್ರ ಒಂದೇ ಸಾಕು ಅವರ ವಿರುದ್ಧ ಕೇಸ್ ಹಾಕಲು ಎಂದು ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES