Monday, November 25, 2024

ತನ್ವೀರ್ ಸೇಠ್ ಪತ್ರ ಬರೆದಿದ್ದರಲ್ಲಿ ತಪ್ಪೆನಿದೆ? : ಸಚಿವ ಶಿವರಾಜ ತಂಗಡಗಿ

ಕೊಪ್ಪಳ : ಡಿಜೆ ಹಳ್ಳಿ, ಕೆಜೆ ಹಳ್ಳಿ ಕೇಸ್ ಗಳ ಪರಿಶೀಲನೆಗೆ ತನ್ವೀರ್ ಸೇಠ್ ಪತ್ರ ಬರೆದಿದ್ದರಲ್ಲಿ ತಪ್ಪೆನಿದೆ? ಪರಿಶೀಲನೆ ಮಾಡಲಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತನ್ವೀರ್ ಸೇಠ್ ಅವರು ನಮ್ಮ ಹಿರಿಯ ಶಾಸಕರು, ಕೆಲವೊಂದಿಷ್ಟು ಸಲಹೆ ಸರ್ಕಾರಕ್ಕೆ ನೀಡಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಯಾರು ನಿಜವಾದ ತಪ್ಪಿತಸ್ಥರು ಇದ್ದಾರೆ ಅವರಿಗೆ ಶಿಕ್ಷೆಯಾಗಲಿ ಎಂದು ತಿಳಿಸಿದ್ದಾರೆ.

ಶಾಸಕರು ಕೆಲ ಸಚಿವರ ವಿರುದ್ಧ ಪತ್ರ ಬರೆದಿರುವ ವಿಚಾರ ಕುರಿತು ಮಾತನಾಡಿ, ಸಿಎಲ್ ಪಿ ಮೀಟಿಂಗ್ ನಮ್ಮಲ್ಲಿ ಕಾಮನ್ ವಿಷಯ, ಅದಕ್ಕೇನೂ ಅಂತಹ ಮಹತ್ವ ಇಲ್ಲ. ಬಿ.ಆರ್ ಪಾಟೀಲ್ ಅವರೇ ಅದು ನನ್ನ ಪತ್ರ ಅಲ್ಲ ಅಂತ ಹೇಳಿದ್ದಾರೆ. ರಾಯರೆಡ್ಡಿ ಅವರು ಕೂಡಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಮ್ಮ ಸಿಎಲ್ ಪಿ ಬಗ್ಗೆ ಮಾಧ್ಯಮದಲ್ಲಿ ಸೃಷ್ಟಿ ಆಗ್ತಿದೆ. ಸರ್ಕಾರ ಅಸ್ಥಿರ ಅನ್ನೊ ಪ್ರಶ್ನೆನೇ ಇಲ್ಲ, ನಮ್ಮದು ಬಹಳ ಗಟ್ಟಿ ಸರ್ಕಾರ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಹಿಜಾಬ್ ವಿವಾದಕ್ಕಿಂತ ಇದು ಹೇಯ ಕೃತ್ಯ : ಕುಯಿಲಾಡಿ ಸುರೇಶ್ ನಾಯಕ್

ಡಿಸಿಎಂಗೆ ಮಾಹಿತಿ ಇರಬಹುದು

ಸಿಂಗಾಪುರದಲ್ಲಿ ಆಪರೇಷನ್ ವಿಚಾರ ಕುರಿತು ಮಾತನಾಡಿ, ನಮ್ಮ ಡಿಸಿಎಂ ಹೇಳಿದ್ದಾರೆ. ಅವರಿಗೆ ಮಾಹಿತಿ ಇರಬಹುದು. ಜೆಡಿಎಸ್ ಹಾಗೂ ಬಿಜೆಪಿ ಅವರಿಗೆ ನಮ್ಮ ಮೇಲೆ ಹೊಟ್ಟೆಯುರಿ. ನಮ್ಮ ಗ್ಯಾರಂಟಿಗಳು ಜಾರಿಯಾದ್ರೆ ಇವರಿಗೆ ಕೆಲಸ ಇಲ್ಲ. ಅದಕ್ಕಾಗಿ ಹೀಗೆ ಎಲ್ಲ ಮಾಡ್ತಿದ್ದಾರೆ ಎಂದು ವಿಪಕ್ಷಗಳ ಮೇಲೆ ಗುಡುಗಿದ್ದಾರೆ.

ಸಿಎಂ, ಡಿಸಿಎಂ ಬುದ್ದಿವಂತರಿದ್ದಾರೆ

ನಮ್ಮ ಸಿಎಂ, ಡಿಸಿಎಂ ಬುದ್ದಿವಂತರಿದ್ದಾರೆ. ಎಲ್ಲವನ್ನೂ ನಿಭಾಯಿಸ್ತಾರೆ. ಇದಕ್ಕೆಲ್ಲ ಏನೂ ಆಗಲ್ಲ. ಲೆಟರ್ ನಲ್ಲಿ ಏನು ಉಲ್ಲೇಖ ಮಾಡಿದ್ದಾರೆ ಅನ್ನೋ ಬಗ್ಗೆ ನಮಗೆ ಗೊತ್ತಿಲ್ಲ. ಅದರ ಬಗ್ಗೆ ಹಿರಿಯರಾದ ಬಸವರಾಜ ರಾಯರೆಡ್ಡಿ ಅವರನ್ನೇ ಕೇಳಬೇಕು. ರಾಯರೆಡ್ಡಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ. ನಾನು ರಾಯರೆಡ್ಡಿ ಅವರು ಬಹಳ ಆತ್ಮೀಯರು ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES