Sunday, June 2, 2024

ಕಾಂಗ್ರೆಸ್ ಶಾಸಕರಿಗೆ ‘ವಿಮಾನ ಟಿಕೆಟ್ ಬುಕಿಂಗ್’ ಮಾಡಿದ್ದಾರೆ : ಡಿಕೆಶಿ ಮತ್ತೊಂದು ಬಾಂಬ್

ಬೆಂಗಳೂರು : ‘ಆಪರೇಷನ್ ಸಿಂಗಾಪುರ’ಗಾಗಿ ಕಾಂಗ್ರೆಸ್ ಶಾಸಕರಿಗೆ ವಿಮಾನ ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ನಾಯಕರ ನಡೆ ಟ್ರ್ಯಾಕ್ ಮಾಡುತ್ತಿದ್ದೇವೆ. ಮುಂದೇನು ಮಾಡ್ತಾರೆ ಅಂತ ನೋಡೋಣ ಎಂದು ಹೇಳಿದ್ದಾರೆ.

‘ಶತ್ರುವಿನ ಶತ್ರು ಮಿತ್ರ’ ಎಂಬಂತೆ ಬಿಜೆಪಿ ಮತ್ತು ಜೆಡಿಎಸ್ ಒಂದಾಗುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಒಟ್ಟಾಗಿ ‘ಆಪರೇಷನ್ ಸಿಂಗಾಪುರ’ ನಡೆಸ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ : ಸಿಂಗಾಪುರದಲ್ಲಿ ಸರ್ಕಾರ ಬೀಳಿಸುವ ಕೆಲಸ ನಡೆಯುತ್ತಿದೆ : ಡಿ.ಕೆ ಶಿವಕುಮಾರ್

ಎಲ್ಲವನ್ನೂ ಟ್ರ್ಯಾಕ್ ಮಾಡುತ್ತಿದ್ದೇವೆ

ಬಿಜೆಪಿ ಹಾಗೂ ಜೆಡಿಎಸ್ ಸ್ನೇಹಿತರು ಸೇರಿ ಕೆಲವು ಕಾಂಗ್ರೆಸ್ ಶಾಸಕರಿಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ. ಇಲ್ಲಿ ಅಥವಾ ಡೆಲ್ಲಿಯಲ್ಲಿ ಸಭೆ ನಡೆಸಲು ಆಗಲಿಲ್ಲ. ಹಾಗಾಗಿ, ಒಂದಷ್ಟು ವಿಮಾನದ ಟಿಕೆಟ್ ಬುಕ್ ಆಗಿರುವ ಮಾಹಿತಿ ಲಭಿಸಿದೆ. ‘ಶತೃವಿನ ಶತೃ ಮಿತ್ರ’ರಾಗುತ್ತಿದ್ದಾರೆ. ಈ ಒಪ್ಪಂದದಲ್ಲಿ ಇಬ್ಬರೂ ಮುಂದುವರೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಟ್ರ್ಯಾಕ್ ಮಾಡುತ್ತಿದೆ ಎಂದು ಹೇಳಿದ್ದಾರೆ.

ಸರ್ಕಾರ ಉರುಳಿಸೋಕೆ ಆಪರೇಷನ್

ಸರ್ಕಾರ ಬೀಳಿಸಲು ಆಪರೇಷನ್ ತಂತ್ರ ನಡೆಯುತ್ತಿದೆ ಎಂದು ಡಿ.ಕೆ ಶಿವಕುಮಾರ್ ಮತ್ತೊಮ್ಮೆ ಪುನರುಚ್ಚರಿಸಿದರು. ಎಲ್ಲವೂ ಚರ್ಚೆ ಆಗಬೇಕಲ್ವಾ? ಹೋಗೋರೆಲ್ಲಾ ಹೋಗಿ ಅಲ್ಲಿ ಚರ್ಚೆ ಮಾಡಲಿ. ಇಲ್ಲಿ ಇರುವವರೆಲ್ಲಾ ಇಲ್ಲೇ ಚರ್ಚೆ ಮಾಡಲಿ. ಎಲ್ಲೆಲ್ಲಿ, ಏನೇನಾಗ್ತಿದೆ ಅಂತ ನಮಗೆ ಮಾಹಿತಿ ಇದೆ ಎಂದು ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES