Friday, November 22, 2024

ಯಡಿಯೂರಪ್ಪ ಮೌನವಾಗಿದ್ದಾರೆ, ಆ ಬಗ್ಗೆ ಮಾತನಾಡಿಲ್ಲ : ಆಯನೂರು ಮಂಜುನಾಥ್

ಶಿವಮೊಗ್ಗ : ಬಿಜೆಪಿಯವರು ಸದನದಲ್ಲಿ ಸಂವೇದನೆ ಕಳೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಿರಿಯರಾದ ಡಿ.ಹೆಚ್ ಶಂಕರಮೂರ್ತಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವಂತವರು ಇದ್ದಾರೆ. ಇವರ್ಯಾರೂ ಆ ಬಗ್ಗೆ ಮಾತನಾಡಿಲ್ಲ ಎಂದರು.

ಶಿವಮೊಗ್ಗದಲ್ಲಿ ಹೊಸ ಶಾಸಕರನ್ನೂ ಒಳಗೊಂಡಂತೆ ಐದಾರು ಬಾರಿ ಆಯ್ಕೆಯಾದ ಶಾಸಕರೂ ಕೂಡ ಪೀಠಕ್ಕೆ ಅಗೌರ ತೋರಿರುವುದು ಸರಿಯಲ್ಲ. ಸಂವೇದನೆ ಕಳೆದುಕೊಳ್ಳುತ್ತಿರುವ ಬಿಜೆಪಿಯವರು ತಕ್ಷಣವೇ ಸಭಾಪತಿಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ : ಶಿವಮೊಗ್ಗ ಮೇಯರ್ ಸ್ಥಾನಕ್ಕೇರಿದ ಎಸ್. ಶಿವಕುಮಾರ್!

ಪ್ರತಿಭಟನೆ ಮಾಡೋದು ಸರಿಯಲ್ಲ

ಸದನಕ್ಕೆ ತನ್ನದೇ ಆದ ಗೌರವವಿದೆ, ಸಿದ್ಧಾಂತಗಳಿವೆ, ನಿಯಮಗಳಿವೆ. ಹಾಗೆಯೇ ಸಭಾಪತಿಗಳ ಪೀಠಕ್ಕೆ ತನ್ನದೇ ಆದ ಗೌರವವಿದೆ. ಇದನ್ನು ಕಾಪಾಡಬೇಕಾದ ಹೊಣೆ ಎಲ್ಲಾ ಶಾಸಕರದ್ದೂ ಆಗಿದೆ. ಸದನದಲ್ಲಿ ಸಭಾಪತಿಗಳು ತೆಗೆದುಕೊಂಡ ನಿರ್ಧಾರವೇ ಅಂತಿಮ. ರಾಜ್ಯಪಾಲರು ಕೂಡ ಅದನ್ನು ಪ್ರಶ್ನಿಸುವಂತಿಲ್ಲ. ನ್ಯಾಯಾಲಯಗಳು ಕೂಡ ಅದನ್ನು ಗೌರವಿಸುತ್ತವೆ. ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.

ಬಜೆಟ್ ಅಧಿವೇಶನದಲ್ಲಿ ಸರಿಯಾಗಿ ಚರ್ಚೆ ಆಗಲೇ ಇಲ್ಲ.  ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ದುಡುಕಿನ ನಿರ್ಧಾರ ತೆಗೆದುಕೊಂಡಿವೆ. ಸದನದ ಒಳಗೆ ಪ್ರತಿಭಟನೆ ಮಾಡುವುದು ಹೊಸದೇನಲ್ಲ. ಹಾಗೆಯೇ ಆಡಳಿತ ಪಕ್ಷದ ಕಾನೂನು ಸಚಿವರು ನೀಡಿದ ಸಲಹೆ ಮೇರೆಗೆ ಸಭಾಧ್ಯಕ್ಷರು ಬಿಜೆಪಿ ಸದಸ್ಯರನ್ನು ಅಮಾನತು ಮಾಡಿರುವುದು ಕೂಡ ವಿಷಾಧನೀಯ ಎಂದರು.

RELATED ARTICLES

Related Articles

TRENDING ARTICLES