ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 1ರಂದು ಹೊಸ ದರ ಜಾರಿ ಮಾಡುವ ಭರವಸೆ ನೀಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ಪಾದಕರ ಹಿತ ಕಾಯಲು ದರ ಏರಿಕೆ ಅನಿವಾರ್ಯ ಎಂದು ತಿಳಿಸಿದರು.
ಹಾಲು ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರೈತರು ಉತ್ಪಾದಕರಿಗೆ ದರ ಏರಿಕೆ ಅನಿವಾರ್ಯತೆ ಇದೆ ಎಂದು ಮನವರಿಕೆ ಮಾಡಿದ್ವಿ. ನಮ್ಮ ರಾಜ್ಯ ಅತಿ ಕಡಿಮೆ ದರದಲ್ಲಿ ಹಾಲು ಮಾರಾಟ ಮಾಡ್ತಿದ್ದೀವಿ. ರೈತರಿಂದ ಖರೀದಿ ದರವೂ ಕಡಿಮೆ ಇದೆ. ರೈತರಿಗೆ ಹಾಲು ಉತ್ಪಾದನ ದರ ಹೆಚ್ಚಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ನಂದಿನಿ ಹಾಲಿನ ದರ 3 ರೂ. ಏರಿಕೆ
ದಶಮಾನೋತ್ಸವ ಆಚರಿಸಲು ನಿರ್ಧಾರ
ಉತ್ಪಾದಕರಿಂದ 94 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಿದೆ. ಹೊಸ ದರ ಆಗಸ್ಟ್ 1ರಂದು ಜಾರಿ ಮಾಡುವ ಭರವಸೆ ನೀಡಿದ್ದಾರೆ. ಕ್ಷೀರ ಭಾಗ್ಯ ಲಾಂಚ್ ಆಗಿ 10 ವರ್ಷ ಆದ ಹಿನ್ನಲೆ ದಶಮಾನೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಐದು ರೂ. ದರ ಹೆಚ್ಚಿಸುವಂತೆ ಒತ್ತಾಯ ಮಾಡಿದ್ದೇವೆ. 3 ರೂ. ಜಾಸ್ತಿ ಮಾಡೋ ಭರವಸೆ ಇದೆ. ಮುಂದಿನ ಮಂತ್ರಿಮಂಡಲದಲ್ಲಿ ತೀರ್ಮಾನ ಕೈಗೊಳ್ಳೋದಾಗಿ ಹೇಳಿದ್ದಾರೆ. ನಾವು 39 ರೂ.ಗೆ ಪ್ರತೀ ಲೀಟರ್ ಹಾಲು ಮಾರಾಟ ಮಾಡ್ತಿದ್ದೀವಿ. ಬೇರೆ ರಾಜ್ಯದಲ್ಲಿ ಹಾಲಿನ ದರ ಏರಿಕೆ ಇದೆ ಎಂದು ಹೇಳಿದರು.