Monday, November 25, 2024

ವಿರಾಟ್ ಕೊಹ್ಲಿ ದಾಖಲೆಯ ಶತಕ

ಬೆಂಗಳೂರು : ರನ್ ಮೆಷಿನ್ ವಿರಾಟ್ ಕೊಹ್ಲಿ ತಮ್ಮ 500ನೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಮತ್ತೊಂದು ಸ್ಮರಣೀಯ ದಾಖಲೆ ನಿರ್ಮಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಇದು ವಿರಾಟ್ ಕೊಹ್ಲಿಯ ವೃತ್ತಿ ಜೀವನದ 76ನೇ ಹಾಗೂ ಟೆಸ್ಟ್ ವೃತ್ತಿ ಜೀವನದ 29ನೇ ಶತಕವಾಗಿದೆ.

180 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 101* ರನ್ ಗಳಿಸಿದರು. ಎರಡನೇ ದಿನ ಮೊದಲ ಇನ್ನಿಂಗ್ಸ್ ಮುಂದುವರಿಸಿರುವ ಭಾರತ 4 ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿದೆ.

ಇನ್ನೂ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎಲ್ಲಾ ಮಾದರಿಗಳಲ್ಲಿ ಹೆಚ್ಚು ರನ್ ಗಳಿಸಿರುವ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಆ ಮೂಲಕ ರಾಹುಲ್ ದ್ರಾವಿಡ್ ದಾಖಲೆಯನ್ನು ಉಡೀಸ್ ಮಾಡಿದ್ದಾರೆ.

ಹೆಚ್ಚು ರನ್ ಗಳಿಸಿದ ಆಟಗಾರರು

ಸಚಿನ್ ತೆಂಡೂಲ್ಕರ್ : 34,357 (782 ಇನ್ನಿಂಗ್ಸ್)

ವಿರಾಟ್ ಕೊಹ್ಲಿ* : 25,548 (559 ಇನ್ನಿಂಗ್ಸ್)

ರಾಹುಲ್ ದ್ರಾವಿಡ್ : 24,064 (599 ಇನ್ನಿಂಗ್ಸ್)

ಸೌರವ್ ಗಂಗೂಲಿ : 18,433 (485 ಇನ್ನಿಂಗ್ಸ್)

ರೋಹಿತ್ ಶರ್ಮಾ* : 17,298 (463 ಇನ್ನಿಂಗ್ಸ್)

ಮಹೇಂದ್ರ ಸಿಂಗ್ ಧೋನಿ : 17,092 (523 ಇನ್ನಿಂಗ್ಸ್)

RELATED ARTICLES

Related Articles

TRENDING ARTICLES