ಬೆಂಗಳೂರು : ಹಣ ಡಬಲ್ ಮಾಡುವುದಾಗಿ ಹೇಳಿ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ! ಗ್ರಾಹಕರ ಜೇಬಿಗೆ ಕತ್ತರಿ
ಎ.ಎನ್. ಶೇಷಗಿರಿ ಬಂಧಿತ ಆರೋಪಿ, ಬಂಧಿತ ಆರೋಪಿಯಿಂದ 45 ಲಕ್ಷ ರೂ.ಗಳ ಹಣ ವಶಕ್ಕೆ ಪಡೆಯಲಾಗಿದೆ. ರಾಘವೇಂದ್ರ ಆಚಾರ್ಯ ಎಂಬುವವರಿಗೆ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ 20 ತಿಂಗಳಲ್ಲಿ ಡಬಲ್ ಮಾಡಿಕೊಡ್ತಿನಿ ಎಂದು ಭರವಸೆಯನ್ನು ನೀಡಿದ್ದ.
ಆರೋಪಿಯ ಮಾತನ್ನು ನಂಬಿದ ರಾಘವೇಂದ್ರ ತನ್ನ ಮನೆಯ ಸೇಲ್ ಅಗ್ರಿಮೆಂಟ್ ಮಾಡಿಸಿ ಬ್ಯಾಂಕ್ ನಿಂದ ಸಾಲ ಪಡೆದಿದ್ದ ಹಣವನ್ನು ಹೂಡಿಕೆ ಮಾಡಿದ್ದ. 2022ರ ಮಾರ್ಚ್ ನಿಂದ ಡಿಸೆಂಬರ್ ವರೆಗೂ 1.07 ಕೋಟಿ ಹಣ ಪಡೆದು ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು, ದೂರಿನ ಆಧಾರದ ಮೇಲೆ ಆರೋಪಿಯನ್ನ ಬೆನ್ನುಹಟ್ಟಿದ ಪೊಲೀಸರು, ತಮಿಳುನಾಡಿನ ಚನ್ನೈನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.