ಬೆಂಗಳೂರು : ಐಎಎಸ್ ಅಧಿಕಾರಿಗಳನ್ನು ಆಥಿತ್ಯಕ್ಕಾಗಿ ನೇಮಿಸಿದ ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೌಂಟರ್ ಕೊಟ್ಟರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಇದ್ದಾರಲ್ಲಾ.. ಜೆಡಿಎಸ್ ಲೀಡರ್.. 2018 ರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಆಗ ಬಹಳ ಜನ ಲೀಡರ್ ಗಳು ಬಂದಿದ್ರು. ಆಗ ಇವ್ರೇ ಐಎಎಸ್ ಅಧಿಕಾರಿಗಳನ್ನ ಆಥಿತ್ಯಕ್ಕಾಗಿ ನೇಮಿಸಿದ್ರು ಎಂದು ಕುಟುಕಿದರು.
ಡ್ಯಾನಿಶ್ ಅಲಿ ಆಗ ಜೆಡಿಎಸ್ ನ್ಯಾಶನಲ್ ಸೆಕ್ರೆಟರಿ ಆಗಿದ್ರು. ಇವ್ರಿಗೆ ವೈ.ಎಸ್ ಪಾಟೀಲ್ ಎಂಬ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿದ್ರು. ರಾಜ್ಯಪಾಲರನ್ನು ಭೇಟಿ ಮಾಡೋಕೆ ಹೋಗಿದ್ದಾರೆ. ಐಎಎಸ್ ಅಧಿಕಾರಿಗಳನ್ನು ನಾವು ನಿಯೋಜನೆ ಮಾಡಿರಲಿಲ್ಲ ಅಂತ ಸುಳ್ಳು ಹೇಳ್ತಾರಲ್ಲಾ? ಅವ್ರು ಸತ್ಯ ಹೇಳ್ತಾರೆ ಅಂದುಕೊಂಡಿದ್ದೆ, ಸುಳ್ಳು ಹೇಳಿಬಿಟ್ಟಿದ್ದಾರೆ ಎಂದು ಚಾಟಿ ಬೀಸಿದರು.
ಇದನ್ನೂ ಓದಿ : ನಿನ್ನೆ ನಡೆದ ಘಟನೆಗೆ ‘ಅಬೀಬಿ ಪಿಕ್ಚರ್ ಬಾಕಿ ಹೈ’ : ಸುರೇಶ್ ಕುಮಾರ್
ವಿಪಕ್ಷದಲ್ಲಿ ಕೂರಲು ಯೋಗ್ಯರಲ್ಲ
ಆಗ ನಾಯಕರು ದೇಶದ ಬಗ್ಗೆ ಚರ್ಚೆ ಮಾಡೋಕೆ ಬಂದಿರಲಿಲ್ಲ, ಪ್ರಮಾಣ ವಚನಕ್ಕೆ ಬಂದಿದ್ರು. ಆಗ ಯಾರೂ ತುಟಿಕ್, ಪಿಟಿಕ್ ಎಂದಿರಲಿಲ್ಲ. ಈಗ ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿ ಬಾವಿಗಿಳಿದಿದ್ದಾರೆ. ಬಾವಿಗಿಳಿಯಲಿ ನಂಗೆ ಬೇಜಾರಿಲ್ಲ. ಆದ್ರೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆ. ವಿಧಾನಸಭೆ ಉಪ ಸಭಾಧ್ಯಕ್ಷರ ಮುಖಕ್ಕೆ ಪೇಪರ್ ಎಸೆದಿದ್ದಾರೆ. ಅವ್ರು ವಿರೋಧ ಪಕ್ಷದಲ್ಲಿ ಕೂರಲು ಯೋಗ್ಯರಲ್ಲ ಎಂದು ವಾಗ್ದಾಳಿ ನಡೆಸಿದರು.