ಬೆಂಗಳೂರು : ನಿನ್ನೆ ನಡೆದ ಘಟನೆಗೆ ‘ಅಬೀಬಿ ಪಿಕ್ಚರ್ ಬಾಕಿ ಹೈ’ ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಕೆಯ ಸಂದೇಶ ರವಾನಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಮ್ಮ ಶಾಸಕರು ಒಗ್ಗಟ್ಟಿನ ಪ್ರತಿಭಟನೆ ಮಾಡಿದ್ದೀವಿ. ನಾವೆಲ್ಲಾ ರಾಜ್ಯಪಾಲರ ಬಳಿ ಹೋಗ್ತಿದ್ದೇವೆ, ಎಲ್ಲರೂ ಬನ್ನಿ ಎಂದು ಹೇಳಿದರು.
ಇಂದು ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ವಿಧಾನಸಭೆಯ ಬಾಗಿಲನ್ನು ಒದ್ದು.. ಒದ್ದು.. ಬಾಗಿಲು ಮುರಿದು ಸಭೆ ಪ್ರವೇಶ ಮಾಡಿದ್ರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇರೋ ಬರೋ ಫೈಲೆಲ್ಲಾ ಎಸೆದು ಹೋಗಿದ್ರು, ಹರಿದು ಹಾಕಿದ್ರು ಎಂದು ಛೇಡಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಬಂದ್ಮೇಲೆ ಕೆಟ್ಟ ಹುಳಗಳು ಹೊರಗೆ ಬರ್ತಿವೆ : ಪ್ರಮೋದ್ ಮುತಾಲಿಕ್
ಸ್ಪೀಕರ್ ಮೈಕ್ ಕಿತ್ತು ಎಸೆದಿದ್ರು
ಇಂದು ಸಚಿವ ಆಗಿರೋ ಬಿ.ಝಡ್ ಜಮೀರ್ ಅಹಮದ್ ಖಾನ್ ಅವರು ಸದನದಲ್ಲಿ ಸ್ಪೀಕರ್ ಮೈಕ್ ಕಿತ್ತು ಎಸೆದಿದ್ರು. ಇದೆಲ್ಲಾ ಕೃತ್ಯ ಮಾಡಿದವರು ಸದನದ ಒಳಗೆ ಇದ್ದಾರೆ. ಬರೀ ಪೇಪರ್ ಎಸೆದವರನ್ನು ಹೊರಗೆ ಹಾಕಿದ್ದಾರೆ ಎಂದು ಸುರೇಶ್ ಕುಮಾರ್ ಗುಡುಗಿದರು.
ನಾವ್ಯಾರು ಸದನಕ್ಕೆ ಹೋಗ್ತಿಲ್ಲ. ಹಾಗೆ ವಿಧಾನಪರಿಷತ್ ಸದಸ್ಯರು ಕೂಡ ಸಭೆಯನ್ನು ಬಹಿಷ್ಕಾರ ಮಾಡಿ ನಮ್ಮ ಜೊತೆ ಬಂದಿದ್ದಾರೆ. ಮತ್ತೊಮ್ಮೆ ರಾಜ್ಯಪಾಲರ ಕದ ತಟ್ಟುವ ಕೆಲಸ ಮಾಡ್ತೀವಿ. ಅವರು ಮಧ್ಯಪ್ರವೇಶ ಮಾಡಬೇಕು ಎಂದು ಹೇಳಿದರು.