Tuesday, November 5, 2024

ಧರ್ಮಸ್ಥಳದ ಹೆಸರು ಕೆಡಿಸುವ ಯತ್ನ : ಕೊನೆಗೂ ಮೌನ ಮುರಿದ ವೀರೇಂದ್ರ ಹೆಗ್ಗಡೆ

ಮಂಗಳೂರು : ಧರ್ಮಸ್ಥಳದ ಸೌಜನ್ಯ ಪ್ರಕರಣ ತೀರ್ಪಿನ ಬಳಿಕ ಕೊನೆಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರು ಮೌನ ಮುರಿದ್ದಾರೆ.

ಧರ್ಮಸ್ಥಳದ ವಿವಿಧ ವಿಭಾಗಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಸೌಜನ್ಯ ಹೆಸರು ಪ್ರಸ್ತಾಪಿಸದೆ ಧರ್ಮಸ್ಥಳದ ಹೆಸರು ಕೆಡಿಸುವ ಯತ್ನ. ನಮ್ಮ ಆತ್ಮ ಮತ್ತು ವ್ಯವಹಾರ ಎಲ್ಲವೂ ಸ್ವಚ್ಛವಾಗಿದೆ ಎಂದು ಬೇಸರಿಸಿದ್ದಾರೆ.

ಕ್ಷೇತ್ರದಲ್ಲಿ 60 ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ. ಹಲವು ಸೇವೆ ಮಾಡಿಕೊಂಡು ಬಂದಿದ್ದೇವೆ. ಒಳ್ಳೆಯ ಕೆಲಸ ಅನ್ನೋದು ಎರಡು ರೀತಿಯ ಕತ್ತಿ ಇದ್ದ ಹಾಗೆ. ಅದು ಎರಡೂ ಕಡೆಯಿಂದ ಕೊಯ್ತದೆ, ಪ್ರಚಾರದ ದೃಷ್ಟಿಯಲ್ಲಿ ಒಳ್ಳೆಯದು ಹಾಗೂ ದ್ವೇಷ ಕೂಡ ಉಂಟು ಮಾಡ್ತದೆ ಎಂದು ಹೇಳಿದ್ದಾರೆ.

ನಮಗೆ ಕೋಟ್ಯಂತರ ಅಭಿಮಾನಿಗಳ ಬಳಗ ಇದೆ. ಇದರಲ್ಲಿ ಕೆಲವರಿಗೆ ದ್ವೇಷ ಆಗಿದೆ. ಇದಕ್ಕೆ ದ್ವೇಷ, ಅಸೂಯೆ ಕಾರಣ. ಧರ್ಮಸ್ಥಳದ ಹೆಸರಲ್ಲಿ ಒಳ್ಳೆಯ ಕೆಲಸ ಆಗ್ತಿದೆ ಅಂತ. ಕ್ಷೇತ್ರದ ಸಂಪತ್ತನ್ನು ಹೇಗೆ ಬಳಸ್ತೀವಿ ಅನ್ನೋದ್ರ ಮೇಲೆ ಅದರ ಪರಿಣಾಮ ಇದೆ. ಈಗ ಅವರು ಮಾತನಾಡುವ ವಿಷಯಗಳು ನಮಗೆ ಸಂಬಂಧವೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ : ಈ ವಯಸ್ಸಿನಲ್ಲಿ ರಾಜಕೀಯ ಬೇಡ: ಡಾ.ವೀರೇಂದ್ರ ಹೆಗ್ಗಡೆ

ಸಿಬಿಐಗೆ ಒಪ್ಪಿಸಿ ಅಂತ ಹೇಳಿದ್ದು ನಾನೇ

ಪ್ರಕರಣ ತನಿಖೆ ಮಾಡಲು ಮೊದಲು ಸರ್ಕಾರಕ್ಕೆ ಮೊದಲು ಪತ್ರ ಬರೆದಿದ್ದೇ ನಾನು. ಸಿಬಿಐಗೆ ಒಪ್ಪಿಸಿ ಅಂತ ಮುಖ್ಯಮಂತ್ರಿಗಳಿಗೆ ಹೇಳಿದ್ದು ನಾನೇ. ಮತ್ತಷ್ಟು ತನಿಖೆ, ಸಂಶೋಧನೆ ಮಾಡಲಿ ಅದರಿಂದ ನಮಗೆ ತೊಂದರೆ ಇಲ್ಲ. ಆದರೆ, ಕ್ಷೇತ್ರದ ವಿಷಯ ಯಾಕೆ ಎಳೀತಾರೆ ಅಂತ ಗೊತ್ತಾಗ್ತಿಲ್ಲ. ಇದರ ಹಿಂದೆ ಅಮಾಯಕ ಹುಡುಗಿಯ ಸಾವಿನ ವಿಚಾರ ಇಲ್ಲ, ಕ್ಷೇತ್ರದ ವಿಚಾರ ಇದೆ ಎಂದು ಹೇಳಿದ್ದಾರೆ.

ಪ್ರೀತಿ ಮತ್ತು ದ್ವೇಷ ಯಾರಿಗಿದೆ

ನನಗೆ ಯಾವುದೇ ಭಯ, ಸಂಕೋಚ ಹಾಗೂ ಸಂದೇಹ ಇಲ್ಲ. ಶತ್ರುತ್ವಕ್ಕೆ ಕಾರಣ ಏನು ಅನ್ನೋದೇ ನಮಗೆ ಇರೋ ಸಮಸ್ಯೆ. ಹಾಗಾಗಿ, ನಮ್ಮ ಸಿಬ್ಬಂದಿಗಳಿಗೆ ಈ ಸತ್ಯ ಗೊತ್ತಿರಬಹುದು. ನಾವು ಯಾಕೆ ಸುಮ್ಮನಿದ್ದೇವೆ ಅಂತ ಅನಿಸಬಾರದು. ನಾವು ಸುಮ್ಮನಿರೋದು ಸಂಭಾಷಣೆ ಆರಂಭವಾಗಬಾರದು ಅಂತ. ಅನೇಕರು ಬಂದು ಕಣ್ಣೀರು ಹಾಕ್ತಾ ಇದಾರೆ, ನಿಮಗೆ ಹೀಗಾದರೆ ಹೇಗೆ ತಡೆಯೋದು ಅಂತ. ಆದರೆ, ಈಗ ಪ್ರೀತಿ ಮತ್ತು ದ್ವೇಷ ಯಾರಿಗಿದೆ ಅಂತ ಗೊತ್ತಾಗ್ತಿದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES