Monday, November 25, 2024

ಬೆಂಗಳೂರನ್ನು ಟಾರ್ಗೆಟ್ ಮಾಡಿರುವ ಉಗ್ರರ ಗುಂಪು

ಬೆಂಗಳೂರು : ಬೆಂಗಳೂರನ್ನು ಟಾರ್ಗೆಟ್ ಮಾಡಿರುವ ಉಗ್ರರ ಗುಂಪು ಒಂದು ಕನಕನಗರ ಬಳಿಯ ಸುಲ್ತಾನ ಪಾಳ್ಯ ಮಸೀದಿಯ ಬಳಿ ಟೆರರ್ ಮೀಟಿಂಗ್ ಮಾಡುವ ವೇಳೆ ಸಿಸಿಬಿ ಪೋಲಿಸರ ಬಲೆಗೆ ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿದೆ. 

ಆರೋಪಿಗಳು ಬಾಂಬ್ ಬ್ಲಾಸ್ಟ್ ಕೇಸ್ ನ ರೂವಾರಿಗಳು ಹಾಗೂ ಇನ್ನ ದೊಡ್ಡ ದೊಡ್ಡ ಉಗ್ರರ ಸಂಪರ್ಕಗಳನ್ನು ಹೊಂದಿರುವ ಐವರು ಆರೋಪಿಗಳು. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಸುಹೈಲ್, ಉಮರ್, ತಬ್ರೇಜ್, ಮುದಾಸಿರ್ ಹಾಗೂ ಫೈಜಲ್ ರಬ್ಬಾನಿ ಎಂಬುವವರನ್ನು ಕೇಂದ್ರ ಗುಪ್ತಚರ ಮಾಹಿತಿ‌‌ಗಳ ಮೇರೆಗೆ ಬೆಂಗಳೂರಿನಲ್ಲಿ ಆರೋಪಿಗಳನ್ನು ಬಂದಿಸಿಲು ಸಿಸಿಬಿ ಯಶ್ವವಿಯಾಗಿದ್ದಾರೆ.

ರೌಡಿಗಳಾಗಿದ್ದ ಶಂಕಿತರು
ಬೆಂಗಳೂರಿನಲ್ಲಿ ಸದ್ದಿಲ್ಲದೆ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಶಂಕಿತರು ಅಸಲಿಗೆ ರೌಡಿಗಳಾಗಿದ್ದರು. ಇವರೆಲ್ಲ 2017ರಲ್ಲಿ ಆರ್ ಟಿ ನಗರದಲ್ಲಿ ನೂರ್ ಅಹ್ಮದ್‍ನ ಕಿಡ್ನಾಪ್ ಕಮ್ ಮರ್ಡರ್ ಕೇಸ್ ನ ಆರೋಪಿಗಳು. ಈ ಕೇಸಲ್ಲಿ 21 ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಕೊಲೆ ಮಾಡಿ ಜೈಲು ಸೇರಿದ ರೌಡಿಗಳಿಂದ ಇದೀಗ ಬ್ಲ್ಯಾಸ್ಟ್ ಗೆ ಸಂಚು ರೂಪಿಸಲಾಗುತ್ತಿತ್ತು.

ಅದ್ರೆ ಕೊಲೆಯ ಪ್ರಕಣದ ಆರೋಪಿ ಜುನೈದ್ ಎಂಬಾತ ಸಿಸಿಬಿ ಬಲೆ ಬೀಸಿದ ವೇಳೆ ಸದ್ಯ  ತಲೆಮರೆಸಿಕೊಂಡಿದ್ದಾನೆ.

ಇದನ್ನು ಓದಿ : ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ : ಆರ್​.ಅಶೋಕ್

 ಘಟನೆಯ ಹಿನ್ನಲೆ

ಪೊಲೀಸ್ರು ಆರೋಪಿಗಳ ಬಂಧನಕ್ಕೆ ಎಂದು ಹೋಗಿದ್ದಾಗ ಸುಹೈಲ್ ಆರೋಪಿ ಎಂಬಾತನ ಮನೆಯಲ್ಲಿ ಉಗ್ರಚಟುವಟಿಕೆಗೆ ಸಂಬಂಧಿಸಿದ ಬಗ್ಗೆ ಮೀಟಿಂಗ್ ಮಾಡ್ತಿದ್ರು ಎಂದು ತಿಳಿದು ಬಂದಿದೆ. ಬಳಿಕ ವಿಚಾರಣೆ ವೇಳೆಯಲ್ಲಿ  ತಿಳಿದು ಬಂದ ವಿಷಯ ಏನೆಂದರೆ ತಲೆಮರೆಸಿಕೊಂಡಿದ್ದ ಜುನೈದ್ ಎಂಬಾತ ದೂರದಲ್ಲಿಯೇ ಕುಳಿತು ತನ್ನ ಐವರು ಸ್ನೇಹಿತರಿಗೆ ಉಗ್ರ ಚಟುವಟಿಕೆಗೆ ಎಂದು ಟ್ರೈನಿಂಗ್ ಕೊಡ್ತೀದ್ನಂತೆ ಎಂದು ಮಾಹಿತಿ ತಿಳಿದು ಬಂದಿದೆ.

ಬಳಿಕ 2017ರಲ್ಲಿ ಆರ್ ಟಿನಗರದ ನೂರ್ ಕೊಲೆ ಕೇಸ್ನಲ್ಲಿ ಬಂಧನವಾಗಿದ್ದ ಆರೋಪಿಗಳ ಪೈಕಿ ಇವರು ಐವರು ಟೆರರ್ ಲಿಂಕ್ ಪಡೆದಿದ್ದಾರೆ. ಅಷ್ಟೇ ಅಲ್ಲ ಇನ್ನು ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದಾಗ 2008 ರಲ್ಲಿ ಬೆಂಗಳೂರಿನಲ್ಲಿ ನೆಡೆದ ಸಿರಿಯಲ್ ಬಾಂಬ್ ಬ್ಲಾಸ್ಟ್ ಕೇಸ್ ನ ರುವಾರಿ ನಾಸೀರ್ ಎಂಬ ಉಗ್ರನ ಸಂಪರ್ಕದಲ್ಲಿ ಇದ್ದ ಜುನೈದ್. ಅಲ್ಲದೆ ಕೊಲೆ ಕೇಸ್ ನಲ್ಲಿ ಬೇಲ್ ಮೇಲೆ ಹೊರ ಬಂದ ನಾಸೀರ್ ಮತ್ತೆ ಕೋರ್ಟ್ ಗೆ ಹಾಜರಾಗದೆ ತಲೆ‌ಮರೆಸಿಕೊಂಡಿದ್ದಾ, ಜುನೈದ್ ನು ನಾಸೀರ್ ನ ಸಹಾಯದಿಂದ ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಯಲ್ಲಿ ಆಸಕ್ತಿ ತೋರಿಸಿ ನಾಸೀರ್ ಹೇಳಿದಂತೆ ದೊಡ್ಡ ವಿದ್ವಾಂಸನಂತೆ ಕೃತ್ಯ ನಡೆಸಲು ದೂರದಲ್ಲೇ ಕುಳಿತು ತಯಾರಿಯನ್ನು ನೆಡೆಸಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಿ ಸಿಸಿಬಿಯವರು ಬಂಧಿಸಿದ ವೇಳೆ ಅವರ ಬಳಿ ಸಿಕ್ಕಿರುವ ವಸ್ತುಗಳನ್ನು ನೋಡಿ ಸಿಸಿಬಿ ಪೋಲೀಸ್ರೆ ಆಶ್ಚರ್ಯಕ್ಕೇ ಒಳಗಾಗಿದ್ದಾರೆ.

7 ಕಂಟ್ರಿ ಮೇಡ್ ಪಿಸ್ತೂಲ್ 42ಜೀವಂತ ಗುಂಡುಗಳು : 

ಎರಡು ಸ್ಯಾಟಲೈಟ್ ಪೋನ್ ಮಾದರಿ ವಾಕಿಟಾಕಿಗಳನ್ನು ಸಹ ಇಟ್ಟುಕೊಂಡಿದ್ದರು, ಅದಲ್ಲದೇ ಮೊಬೈಲ್ ಪೋನ್ ಮತ್ತು ವಿವಿಧ ಕಂಪನಿ ಸಿಮ್ ಗಳು, ಲ್ಯಾಪ್ ಟಾಪ್ ಗಳನ್ನು ಸಹ ಇಟ್ಟುಕೊಂಡಿದ್ದ ಉಗ್ರರು. ಆರೋಪಿಗಳು ಗ್ರನೇಡ್ ಮಾದರಿಯ ವಸ್ತುಗಳನ್ನು ಶೇಖರಿಸಿಕೊಂಡಿರುವ ಮಾಹಿತಿಯು ಸಹ ತಿಳಿದು ಬಂದಿದೆ.

ಬಳಿಕ 2008ರ ಸಿರಿಯಲ್ ಬ್ಲಾಸ್ಟ್ ಗಿಂತ ದೊಡ್ಡ ಮಟ್ಟದ ವಿದ್ವಂಸಕ ಕೃತ್ಯಕ್ಕೆ ಉಗ್ರರು ತಯಾರಿಯನ್ನು ಸಹ ಮಾಡಿಕೊಂಡಿದ್ದರು ಎಂಬ ಆರೋಪವು ಕೂಡ ಕೇಳಿ ಬಂದಿದೆ. ಬೆಂಗಳೂರಿನಲ್ಲಿ ಉಗ್ರರು ಮಾಡಿರುವ ಕೃತ್ಯದಿಂದ ಬೆಂಗಳೂರಲ್ಲಿ ಜನರಿಗೆ ತುಂಬ ತೊಂದರೆಯು ನೆಡೆದಿದೆ. ಹಾಗೆಯೇ ಇವ್ರು ಯಾರ ಬಳೀ ಹಣ ಸಹಾಯ ಪಡೆದುಕೊಂಡಿದ್ದಾರೆ ಹಾಗೆಯೇ ಇವ್ರ ತಂಡದಲ್ಲಿ ಇನ್ನೂ ಎಷ್ಟು ಜನ ಇದ್ರು ಅನ್ನೊವುದರ ಬಗ್ಗೆ ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಸಿಸಿಬಿ ಪೋಲಿಸರು ತಿಳಿಸಿದ್ದಾರೆ.

 

 

RELATED ARTICLES

Related Articles

TRENDING ARTICLES