Friday, November 22, 2024

ನನ್ನ ದೇಹದ ಪ್ರತಿ ಕಣವೂ ದೇಶಕ್ಕೆ ಸಮರ್ಪಿತವಾಗಿದೆ : ಪ್ರಧಾನಿ ಮೋದಿ

ನವದೆಹಲಿ : ‘ದೇಹದ ಪ್ರತಿ ಕಣವೂ, ನನ್ನ ಸಮಯದ ಪ್ರತಿ ಕ್ಷಣವೂ ದೇಶಕ್ಕೆ ಸಮರ್ಪಿತವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನವದೆಹಲಿಯಲ್ಲಿ ಎನ್‌ಡಿಎ ಸಭೆಯನ್ನುದ್ದೇಶಿಸಿ ಮಾತನಾಡಿ, ‘ನಾನು ನಿಮಗೆ ಭರವಸೆ ನೀಡುತ್ತೇನೆ.. ನನ್ನ ಶ್ರಮ ಮತ್ತು ನನ್ನ ಪ್ರಯತ್ನಗಳಲ್ಲಿ ನಾನು ಯಾವುದೇ ಕಲ್ಲನ್ನು ಬಿಡುವುದಿಲ್ಲ’ ಎಂದು ದೇಶವಾಸಿಗಳಿಗೆ ಕರೆ ಕೊಟ್ಟರು.

ಇಂದು ಮೋದಿಯವರನ್ನು ಹಿಡಿಶಾಪ ಹಾಕುತ್ತಾ ಕಾಲ ಕಳೆಯುತ್ತಿರುವವರು.. ದೇಶಕ್ಕಾಗಿ, ಬಡವರಿಗಾಗಿ ಯೋಚಿಸುತ್ತಾ ಕಾಲ ಕಳೆಯುತ್ತಿದ್ದರೆ ಚೆನ್ನಾಗಿರುತ್ತಿತ್ತು. ನಾವು ಅವರಿಗಾಗಿ ಮಾತ್ರ ಪ್ರಾರ್ಥನೆ ಮಾಡಬಹುದು ಎಂದು ವಿಪಕ್ಷಗಳಿಗೆ ಚಾಟಿ ಬೀಸಿದರು.

ಪೈಪೋಟಿ ಇರಲಿ, ಹಗೆತನ ಬೇಡ

ರಾಜಕೀಯದಲ್ಲಿ ಪೈಪೋಟಿ ಇರಬಹುದು. ಆದರೆ, ಹಗೆತನ ಇರುವುದಿಲ್ಲ. ನಾವು ಒಂದೇ ದೇಶದ ಜನರು, ಒಂದೇ ಸಮಾಜದ ಭಾಗವಾಗಿದ್ದೇವೆ. ಆದರೆ, ದುರದೃಷ್ಟವಶಾತ್ ಇಂದು ಪ್ರತಿಪಕ್ಷಗಳು ಒಂದೇ ಒಂದು ಗುರುತನ್ನು ಮಾಡಿಕೊಂಡಿವೆ. ನಮ್ಮನ್ನು ನಿಂದಿಸುತ್ತಿದ್ದಾರೆ, ಅವಮಾನಿಸಿದ್ದಾರೆ ಎಂದು ಕೌಂಟರ್ ಕೊಟ್ಟರು.

ಇದನ್ನೂ ಓದಿ : ವಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ INDIA ಹೆಸರು : ಮಲ್ಲಿಕಾರ್ಜುನ ಖರ್ಗೆ

ನವ ಭಾರತದ ಭದ್ರ ಬುನಾದಿ

ನಾನು ಕೆಂಪುಕೋಟೆಯಿಂದ ಹೇಳಿದ್ದೆ.. ‘ಇದು ಸಮಯ, ಸರಿಯಾದ ಸಮಯ. ಇಂದು ದೇಶದಲ್ಲಿ ವಾತಾವರಣ ಸೃಷ್ಟಿಯಾಗಿದೆ. ಕಳೆದ 9 ವರ್ಷಗಳಲ್ಲಿ ನವ ಭಾರತದ ಭದ್ರ ಬುನಾದಿಯನ್ನು ನಿರ್ಮಿಸಲಾಗಿದೆ. ನಾವೆಲ್ಲರೂ ನವ ಭಾರತ, ಸ್ವಾವಲಂಬಿ ಭಾರತ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಮೂಲಕ ಈ ತಳಹದಿಯ ಮೇಲೆ ಬದುಕಬೇಕು’ ಎಂದು ಹೇಳಿದರು.

ಎನ್‌ಡಿಎ ಸುಂದರ ಕಾಮನಬಿಲ್ಲು

‘ಎನ್‌ಡಿಎ ಪ್ರಾದೇಶಿಕ ಮಹತ್ವಾಕಾಂಕ್ಷೆಗಳ ಅತ್ಯಂತ ಸುಂದರವಾದ ಕಾಮನಬಿಲ್ಲು. ಎನ್‌ಡಿಎ ದೇಶಕ್ಕೆ, ದೇಶದ ಜನತೆಗೆ ಸಮರ್ಪಿತವಾಗಿದೆ. ಎನ್‌ಡಿಎಯ ಸಿದ್ಧಾಂತವೆಂದರೆ.. ರಾಷ್ಟ್ರ ಮೊದಲು. ರಾಷ್ಟ್ರದ ಭದ್ರತೆ ಮೊದಲು. ಅಭಿವೃದ್ಧಿ ಮೊದಲು. ಜನರ ಸಬಲೀಕರಣ ಮೊದಲು’ ಎಂದು ಪ್ರಧಾನಿ ಮೋದಿ ತಿಳಿಸಿದರು.

RELATED ARTICLES

Related Articles

TRENDING ARTICLES