Sunday, November 3, 2024

ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ಸಭೆ ಆರಂಭ

ಬೆಂಗಳೂರು : ಬೆಂಗಳೂರಿನ ತಾಜ್​ವೆಸ್ಟ್​ ಎಂಡ್ ಹೋಟೆಲ್​ನಲ್ಲಿ ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ಸಭೆ ಆರಂಭವಾಗಿದೆ. 

ಪಾಟ್ನಾ ಸಭೆ ಬಳಿಕೆ ಇಂದು ಕೇಂದ್ರ ವಿಪಕ್ಷಗಳ ಒಕ್ಕೂಟದ 2ನೇ ಸಭೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆಯಲಿದ್ದು, ಸಭೆಯಲ್ಲಿ 23 ಪಕ್ಷದ 49ಕ್ಕೂ ಹೆಚ್ಚು ನಾಯಕರು ಭಾಗಿಯಾಗಲಿದ್ದಾರೆ.

ವಿಪಕ್ಷಗಳ ಸಭೆ ಹಿನ್ನೆಲೆ ಜಾರ್ಖಂಡ್ ಸಿಎಂ ಜೆಎಂಎಂನ ಹೇಮಂತ್ ಸೊರೇನ್, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್​ನ ಓಮರ್ ಅಬ್ದುಲ್ಲಾ ತಾಜ್ ಹೊಟೇಲ್​ಗೆ ಆಗಮಿಸಿದ್ದಾರೆ.

ಇದನ್ನೂ ಓದಿ : 3ನೇ ಬಾರಿ ಮೋದಿ ಪ್ರಧಾನಿ ಆಗೋದನ್ನು ತಡೆಯಲು ಸಾಧ್ಯವಿಲ್ಲ : ಬಿ.ವೈ ವಿಜಯೇಂದ್ರ

ದೆಹಲಿ, ಪಂಜಾಬ್ ಸಿಎಂ ಭಾಗಿ

ಎಚ್ಎಎಲ್​ಗೆ ಆಗಮಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಶಿವಸೇನೆಯ ಉದ್ದವ್ ಠಾಕ್ರೆ, ಆದಿತ್ಯ ಠಾಕ್ರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಸಭೆಗೆ ಆಗಮಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾದ ಕೇಂದ್ರದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

RELATED ARTICLES

Related Articles

TRENDING ARTICLES