ಬೆಂಗಳೂರು : ವರ್ಗಾವಣೆಯಲ್ಲಿ ಲಂಚ ತಗೊಂಡಿದ್ದಾರೆ ಅಂದರೆ ರಾಜಕೀಯದಿಂದಲೇ ನಿವೃತ್ತಿಯಾಗಿ ಬಿಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಉತ್ತರ ನೀಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಯಾರಾದರೂ ಒಬ್ಬರು ನನ್ನ ಮೇಲೆ ಆ ರೀತಿ ಆರೋಪ ಮಾಡಿಲ್ಲ ಎಂದರು.
ಅವರ ಕಾಲದಲ್ಲಿ ಅಧಿಕಾರ ಮಾಡಿದ್ರಲ್ಲ ವ್ಯಾಪಾರ ನಡೀತ್ತಿತ್ತಾ? ದಂಧೆ ನಡೀತ್ತಿತ್ತಾ? ಮೊದಲ ಕ್ಯಾಬಿನೆಟ್ ನಲ್ಲೇ ಯಾವ ಕಾರಣಕ್ಕೂ ವರ್ಗಾವಣೆಗಳಲ್ಲಿ ಭ್ರಷ್ಟಾಚಾರ ನಡೆಯಬಾರದು ಎಂದು ಸಚಿವರಲ್ಲಿ ಮನವಿ ಮಾಡಿದ್ದೆ. ಕಾನೂನು ಪ್ರಕಾರ ಎಲ್ಲ ಮಂತ್ರಿಗಳನ್ನು ನಾವು ಭರ್ತಿ ಮಾಡಿದ್ದೇವೆ. ಎಲ್ಲರಿಗೂ ಖಾತೆಗಳನ್ನು ಹಂಚಿ ಬಿಟ್ಟಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ಹೇ.. ರೇವಣ್ಣ ನಿಂಬೆಹಣ್ಣು ಬಿಟ್ಟು, ಕೊಬ್ಬರಿ ಜೊತೆ ಬಂದಿದ್ಯಾ? : ಸಿದ್ದರಾಮಯ್ಯ
ವರ್ಗಾವಣೆ ಕಳಂಕವೇ ಇಲ್ಲ
ನಾನು ಎರಡು ಬಾರಿ ಮುಖ್ಯಮಂತ್ರಿ ಆಗ್ತಿರೋದು. ಹಿಂದೆ ಐದು ವರ್ಷಗಳ ಕಾಲ ಪೂರ್ಣಾವಧಿ ಅವಕಾಶ ಸಿಕ್ಕಿತ್ತು. ದೇವರಾಜು ಅರಸು ನಂತರ ನನಗೆ ಪೂರ್ಣಾವಧಿ ಅವಧಿ ಸಿಕ್ಕಿದ್ದು. ಇಷ್ಟು ದಿನಗಳಲ್ಲಿ ವರ್ಗಾವಣೆ ಕಳಂಕವೇ ಇಲ್ಲ ಎಂದು ವಿಪಕ್ಷ ಗಳ ಆರೋಪಕ್ಕೆ ಸಿದ್ದರಾಮಯ್ಯ ಚಾಟಿ ಬೀಸಿದರು.
ರಾಜ್ಯಪಾಲರ ಭಾಷಣದಲ್ಲಿ ನಮ್ಮ ಸರ್ಕಾರದ ನೀತಿ, ನಿಲುವು ಗಳನ್ನು ರಾಜ್ಯಪಾಲರು ಪ್ರಸ್ತಾಪಿಸಿದ್ದಾರೆ. ಜನರು ನಮಗೆ ಆಶೀರ್ವಾದ ಮಾಡಿ ಬಹುಮತ ಕೊಟ್ಟಿದ್ದಾರೆ. ಐದು ವರ್ಷಗಳ ಕಾಲ ಈ ರಾಜ್ಯದ ಚುಕ್ಕಾಣಿ ಹಿಡಿಯಿರಿ. ನಮ್ಮ ಆಶೋತ್ತರಗಳನ್ನು ನೆರವೇರಿಸಿ ಎಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.