ಚಿತ್ರದುರ್ಗ: ಕಲುಷಿತ ನೀರು ಕುಡಿದು 30 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಮೊಳಕಾಲ್ಮೂರು ತಾಲ್ಲೂಕಿನ ನಾಗಸಮುದ್ರದಲ್ಲಿ ನಡೆದಿದೆ.
ಜಲ್ ಜೀವನ್ ಮಿಷನ್ ಪೈಪ್ ಲೈನ್ ಮಾಡುವ ವೇಳೆ ಕುಡಿಯುವ ನೀರಿನ ಪೈಪ್ ಗೆ ಹಾನಿಯಾಗಿ ಚರಂಡಿ ನೀರು ಸೇರಿ ಕಲುಷಿತವಾಗಿರುವ ಶಂಕೆ ಕಂಡು ಬಂದಿದ್ದು, ಚಾಮುಂಡಮ್ಮ, ಓಬಕ್ಕ ಇಬ್ಬರು ತೀವ್ರ ಅಸ್ವಸ್ಥರಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಕರ್ತವ್ಯ ಲೋಪ : ಮೂವರು ಪಿಡಿಒ ಅಮಾನತು
JJM ಪೈಪ್ ಲೈನ್ಕ ಮಾಡುವ ವೇಳೆ ಕುಡಿಯುವ ನೀರಿನ ಪೈಪ್ ಗೆ ಹಾನಿಯಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆದಿರುವ ದುರಂತವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡ ಮಹಿಳೆಯರಿಗೆ ಸ್ಥಳೀಯ ರಾಂಪುರ, ಮೊಳಕಾಲ್ಮೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಲವು ಮಹಿಳೆಯರ ಪರಿಸ್ಥಿತಿ ಗಂಭೀರವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದ ಸ್ಥಳಕ್ಕೆTHO ಡಾ.ಮಧುಕುಮಾರ್ ಭೇಟಿ ಪರಿಶೀಲನೆ. ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು ಸದ್ಯ ಜನರ ಆರೋಗ್ಯ ತಪಾಸಣೆಗಾಗಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದ್ದು, ಪೈಪ್ ಲೈನ್ ವ್ಯಾಪ್ತಿಯಲ್ಲಿ ನೀರು ಕುಡಿದಿರಬಹುದಾದ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.